ಜೀವ ಉಳಿಸಲು ರಕ್ತದಾನ ಅವಶ್ಯಕ

ಮಧುಗಿರಿ, ಜೂ. ೧೪- ಆಲ್ ಇಂಡಿಯಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಮತ್ತು ಮಧುಗಿರಿ ವಾಸವಿ ಯುವಜನ ಸಂಘ, ಅವೋಪ ಹಾಗೂ ವರದಾಯನಿ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಪಟ್ಟಣದ ಪುರಸಭೆ ಮುಂಭಾಗದಲ್ಲಿರುವ ಮಹಿಳಾ ಸಮಾಜ ಭವನದಲ್ಲಿ ನಡೆಯಿತು.


ರಕ್ತದಾನ ಶಿಬಿರಕ್ಕೆ ಪುರಸಭೆ ಅಧ್ಯಕ್ಷರಾದ ಲಾಲಾ ಪೇಟೆ ಮಂಜುನಾಥ್ ಚಾಲನೆ ನೀಡಿ ಮಾತನಾಡಿ, ರಕ್ತದಾನ ಮಹಾದಾನವಾಗಿದೆ. ರಕ್ತದಾನ ಅಪಘಾತ ಹಾಗೂ ಇತರ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ರಕ್ತ ಕೊರತೆ ತಪ್ಪಿಸಿ, ಆತನ ಪ್ರಾಣ ಉಳಿಸಲು ರಕ್ತ ಅತ್ಯವಶ್ಯಕವಾಗಿರುತ್ತದೆ ಎಂದರು.


ಪ್ರತಿಯೊಬ್ಬರೂ ಸಹ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದು ಹೇಳಿದರು.


ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದು ೧೦೪ ಮಂದಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಹಣ್ಣಿನ ರಸ ನೀಡಲಾಯಿತು.


ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಜಿಎಸ್‌ಟಿ ಅಧಿಕಾರಿ ಸುನಂದ, ಆಲ್ ಇಂಡಿಯಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಅಧ್ಯಕ್ಷ ಕೆ.ವಿ. ಸಂದೀಪ್, ಕೃಷ್ಣಮೂರ್ತಿ ಕೆ.ಎಂ., ವರದಾಯನಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಗಾಯತ್ರಿ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.