ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಬಹುದು

ಯಾದಗಿರಿ :ಅ.೨೩: ರಕ್ತದಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ರಕ್ತದಲ್ಲಿನ ಕೊಲೆಸ್ಟಾçಲ್ (ಕೊಬ್ಬು) ಮಟ್ಟವನ್ನು ಕಡಿಮೆ ಮಾಡಬಹುದು, ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಬಹುದು ಎಂದು ಯಾದಗಿರಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ.ಸಂಜಿವಕುಮಾರ ಸಿಂಗ ರಾಯಚೂರಕರ ಅವರು ಹೇಳಿದರು. ವಿಶ್ವ ಬಂಧುತ್ವ ದಿವಸದ ನಿಮಿತ್ಯ ರಾಜಯೋಗಿನಿ ಪ್ರಕಾಶ ಮಣಿಜಿಯವರ ಪುಣ್ಯಸೃತಿಯ ನಿಮಿತ್ಯ ಬ್ರಹ್ಮಕುಮಾರೀಸ್ ಅಮೃತ ಕುಂಜ ಭವನ ರವರಿಂದ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯಾದಗಿರಿದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಕ್ತವನ್ನು ಕೃತಕವಾಗಿ ತಯಾರು ಮಾಡಲು ಆಗುವುದಿಲ್ಲ ೧೮ ರಿಂದ ೬೦ ವಯಸ್ಸಿನ ಎಲ್ಲಾ ಆರೋಗ್ಯವಂತರು ರಕ್ತದಾನ ಮಾಡಬೇಕು, ರಕ್ತದಾನದಿಂದ ನಾಲ್ಕು ಜನರ ಜೀವ ಉಳಿಸಬಹುದು, ರಕ್ತದಾನದ ಮಹತ್ವವನ್ನು ರಕ್ತದಾನ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ರಕ್ತದಲ್ಲಿನ ಕೊಲೆಸ್ಲ್ರಲ್ (ಕೊಬ್ಬು) ಮಟ್ಟವನ್ನು ಕಡಿಮೆ ಮಾಡಬಹುದು, ರಕ್ತವನ್ನು ಕೃತಕವಾಗಿ ತಯಾರು ಮಾಡಲು ಆಗುವುದಿಲ್ಲ ೧೮ ರಿಂದ ೬೦ ವಯಸ್ಸಿನ ಎಲ್ಲಾ ಆರೋಗ್ಯವಂತರು ರಕ್ತದಾನ ಮಾಡಬೇಕು ಎಂದರು. ಈ ಶಿಬಿರದಲ್ಲಿ ಯಾದಗಿರಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಡಾ.ಸಂಜೀವಕುಮಾರ ಸಿಂಗ್ ರಾಯಚೂರಕರ, ಯಾದಗಿರಿ ಶಶಿ ಸೂಪರ ಬಜಾರ ಮಾಲಿಕರು ಮಲ್ಲಿಕಾರ್ಜನ್ ಶಿರಗೋಳ, ರಕ್ತದಾನ ಮಾಡಿದರು, ಒಟ್ಟು ೩೫ ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯಾದಗಿರಿ ಲಾಯಿನ್ಸ ಕ್ಲಬ್ ಅಧ್ಯಕ್ಷರು ಸಿವಿಲ್ ಇಂಜಿನೀಯರ್ಸ್ ಅಧ್ಯಕ್ಷರು ಭೀಮನಗೌಡ ಕ್ಯಾತನಾಳ, ಯಾದಗಿರಿ ನಗರ ರಾಜಯೋಗ ಕೇಂದ್ರದ ಮುಖ್ಯಸ್ಥರು ರಾಜಯೋಗಿನಿ ಬಿ.ಕೆ ನೀರಾ, ಶಹಾಪೂರ ರಾಜಯೋಗ ಕೇಂದ್ರದ ಮುಖ್ಯಸ್ಥರು ರಾಜಯೋಗಿನಿ ಬಿ.ಕೆ ಉಷಾ, ಮೆಡಿಕಲ್ ಸೂಪರಿಡೆಂಟ್ ಡಾ.ಸಂತೋಷ, ಯಾದಗಿರಿ ಯಿಮ್ಸ ರಕ್ತ ಕೇಂದ್ರ ವೈದ್ಯಾಧಿಕಾರಿ ಡಾ.ಸಿದ್ದಲಿಂಗ ರೆಡ್ಡಿ, ಯಾದಗಿರಿ ಪ್ಯಾಥೋಲೊಜಿ ವಿಭಾಗ ಯಿಮ್ಸ ಆಸ್ಪತ್ರೆ ಮುಖ್ಯಸ್ಥರು ಡಾ.ಮಾನಸ, ಯುರೊಲೋಜಿಸ್ಟ ಡಾ.ವಿವೆಕಾನಂದ ಕಟ್ಟಿ, ಯಾದಗಿರಿ ಶಶಿ ಸೂಪರ ಬಜಾರ ಮಾಲಿಕರು ಮಲ್ಲಿಕಾರ್ಜನ್ ಶಿರಗೋಳ ಉಪಸ್ಥಿತರಿದ್ದರು.