ರಕ್ತದಾನ ಶಿಬಿರ

ಲಕ್ಷ್ಮೇಶ್ವರ,ಸೆ4: ತಾಲೂಕಿನ ಸೂರಣಗಿ ಗ್ರಾಮದಲ್ಲಿ ಶ್ರೀ ನವಚೇತನ ಯುವಕಮಂಡಳದ 21ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಒಂಬತ್ತನೇ ಬಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ತಾಲೂಕ ಆರೋಗ್ಯ ಕೇಂದ್ರ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜೇಮ್ಸ್ ಇವರುಗಳ ಸಹಯೋಗದಲ್ಲಿ ಜರುಗಿತು.


ಕಾರ್ಯಕ್ರಮವನ್ನು ಡಾ. ಬಿಜಿ ಅಂಗಡಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಶಿರಹಟ್ಟಿ ಮಂಡಲ ಬಿಜೆಪಿ ಅಧ್ಯಕ್ಷರಾದ ಸುನಿಲ ಮಹಾಂತ ಶೆಟ್ಟರ ಮಾತನಾಡಿ ಕಳೆದು 21 ವರ್ಷಗಳಿಂದ ಗ್ರಾಮದ ಯುವಕರು ಒಗ್ಗಟ್ಟಿನಿಂದ ಗಣೇಶೋತ್ಸವ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ . ಯುವಕರು ಸಂಘಟಿತರಾಗಿ ಸಮಾಜ ಸುಧಾರಣೆಯೊಂದಿಗೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಯುವಕರು ಇಂದು ಅಮೂಲ್ಯವಾದ ವೇಳೆಯನ್ನು ಹಾಳು ಮಾಡುತ್ತಿದ್ದು ಇಂತಹ ಸಂದರ್ಭದಲ್ಲಿ ಜೀವದಾನ ಮಾಡುವ ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕ ಯುವಕರಿಗೆ ಆದರ್ಶಪ್ರಾಯವಾಗಿದ್ದಾರೆ ಇಲ್ಲಿನ ಯುವಕರು ಇನ್ನು ಹೆಚ್ಚು ಹೆಚ್ಚು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದ ಸಾನಿಧ್ಯವನ್ನು ವಿರಕ್ತ ಮಠದ ಶ್ರೀ ಚನ್ನಬಸವೇಶ್ವರ ಶ್ರೀಗಳು ವಹಿಸಿದ್ದರು.


ಕಾರ್ಯಕ್ರಮದಲ್ಲಿ ಗಂಗಾಧರ್ ಮೆಣಸಿನಕಾಯಿ ಈರಪ್ಪ ಶಿರನಹಳ್ಳಿ ಶಂಕ್ರಯ್ಯ ಹಿರೇಮಠ ಚನ್ನಬಸಯ್ಯ ಶೀರನಹಳ್ಳಿ ಸಿದ್ದಯ್ಯ ಸಿದ್ದಯ್ಯ ಮಾದಾಪುರ ಮಠ ಖುಷಿಯನ್ನು ಸಾಬ್ ಕೋಲ್ಕಾರ ಚಂದ್ರಶೇಖರಯ್ಯ ಈರಣ್ಣ ಪೂಜಾರಿ ಜಿಮ್ಸ್ ವೈದ್ಯ ಸಿಬ್ಬಂದಿ ಇದ್ದರು.


ಬಸವರಾಜ್ ದುರ್ಗದ ನಾಗರಾಜ್ ಪೂಜಾರ್ ಕಾರ್ಯಕ್ರಮ ನಿರ್ವಹಿಸಿದರು.