
ಬೀದರ್: ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿಯ ಜಿಲ್ಲಾಧ್ಯಕ್ಷ ವಿಶಾಲ ದೊಡ್ಡಿ ಅವರ ಜನ್ಮದಿನದ ಅಂಗವಾಗಿ ಅವರ ಗ್ರಾಮದ ಯುವಕ ಹೇಬಲ್ ಅವರು ಅಭಿಮಾನದಿಂದ ರಕ್ತದಾನ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ನಿರ್ದೇಶಕರ ನೇತೃತ್ವದಲ್ಲಿ ರಕ್ತದಾನ ಮಾಡಿದ ಹೇಬಲ್ ಅವರು, ರಕ್ತದಾನದಂತಹ ಮಾನವೀಯ ಕಾರ್ಯದ ಮೂಲಕ ವಿಶಾಲ ದೊಡ್ಡಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶಾಲ ದೊಡ್ಡಿ, ತಮ್ಮ ಜನ್ಮದಿನದ ಪ್ರಯುಕ್ತ ಅಭಿಮಾನಿ ಹೇಬಲ್ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿರುವುದು ಸಂತಸ ತಂದಿದೆ. ಅವರ ಪ್ರೀತಿ, ಅಭಿಮಾನ ಹಾಗೂ ಮಾನವೀಯ ಸೇವೆಗೆ ಚಿರಋಣಿಯಾಗಿರುವುದಾಗಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷ ಸಂಗಮೇಶ ಭಾವಿದೊಡ್ಡಿ, ಪ್ರವೀಣ್ ಮೊರೆ, ಸಾಹಿಲ್ ಬಹುತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




















