ದೇವನಹಳ್ಳಿ.ಬೆಂಗ್ರಾ.ಆ೧೩,ಕೈಗಾರಿಕೆಗಳ ತ್ಯಾಜ್ಯ ನೀರು ಕೆರೆಗಳಿಗೆ ಸೇರಿದ ಪರಿಣಾಮ, ಕೆರೆ ಕಲುಷಿತವಾಗಿದೆ, ಅಂತರ್ಜಲ ವಿಷವಾಗಿದ, ಶುದ್ಧೀಕರಣ ಘಟಕದ ನೀರು ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದೆ, ಶುದ್ಧ ನೀರಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿರುವ ಗ್ರಾಮಸ್ಥರು ತಮ್ಮ ಬೇಡಿಕೆ ಈಡೆರಿಕೆಗಾಗಿ ಸ್ವಾತಂತ್ಯ ದಿನದಂದ್ದು ಕಪ್ಪು ಬಾವುಟ ಹಾರಿಸು ವುದ್ದಾಗಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ೧೭ ಗ್ರಾಮಗಳ ಜನರು ಸ್ವಾತಂತ್ರ್ಯ ದಿನದಂದ್ದು ತಮ್ಮ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವುದ್ದಾಗಿ ತಿರ್ಮಾನ ಮಾಡಿದ್ದಾರೆ, ಈ ಹಿನ್ನೆಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೇಕ್ಟರ್ ದೊಡ್ಡತುಮಕೂರು ಗ್ರಾಮಕ್ಕೆ ಭೇಟಿ ನೀಡಿ ಕಪ್ಪು ಬಾವುಟ ಹಾರಿಸದಂತೆ ರೈತರನ್ನ ಮನವೊಲಿಸುವ ಪ್ರಯತ್ನ ಮಾಡಿದರು.
ಅಧಿಕಾರಿಗಳ ಮನವೊಲೈಕೆಗೆ ಸೋಲಾದ ಅರ್ಕಾವತಿ ನದಿ ಹೋರಾಟ ಸಮಿತಿಯ ಹೋರಾಟಗಾರರು, ಈಗಾಗಲೇ ನಾವು ಎರಡು ಬಾರಿ ಚುನಾವಣೆ ಬಹಿಷ್ಕಾರ ಮಾಡಿದ್ದೇವು, ಅಧಿಕಾರಿಗಳ ಅಶ್ವಾಸನೆ ಮಾತು ನಂಬಿ ಹೋರಾಟದಿಂದ ಹಿಂದೆ ಸರಿದೇವು. ಆದರೆ, ನಮ್ಮ ಬೇಡಿಕೆ ಮಾತ್ರ ಆಗೆಯೇ ಇದೆ, ಸದ್ಯ ನಾವು ಸಾವು ಬದುಕಿನ ನಡುವೆ ಬದುಕುವಂತಾಗಿದೆ, ನಮಗೆ ಶುದ್ಧ ಪರಿಸರ ಮತ್ತು ನೀರು ಕೊಡದ ಹೊರತು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಕಪ್ಪು ಬಾವುಟ ಹಾರಿಸೋದು ಬೇಡಾ ಎಂದಾದರೆ, ನಮ್ಮ ದಯಾಮರಣ ಅರ್ಜಿಗಳನ್ನ ಸ್ವೀಕರಿಸಿ ಎಂದರು, ದಯಾ ಮರಣ ಅರ್ಜಿ ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದರು.
ಹೋರಾಟ ಸಮಿತಿಯ ಗೌರವಾಧ್ಯಕ್ಷ ಡಾ.ಟಿ.ಎಚ್. ಆಂಜಿನಪ್ಪ ಸೇರಿದಂತೆ ಹೋರಾಟಗಾರರು ಅಧಿಕಾರಿಗಳ ಮುಂದೆ ಬೇಡಿಕೆಯನ್ನಿಟ್ಟು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಲಿಖಿತ ಭರವಸೆಯನ್ನ ನೀಡಬೇಕು. ಅದರ ಹೊರತು ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ, ಕಪ್ಪು ಬಾವುಟ ಹಾರಿಸೋದು ಖಚಿತ ಎಂದರು


























