
ಯಾದಗಿರಿ:ಜ.25: ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲರಿಗೆ ಅಗೌರವ ತೋರಿದ ಆರೋಪದ ಹಿನ್ನೆಲೆಯಲ್ಲಿ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಆಗ್ರಹ
ಯಾದಗಿರಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸುಭಾಷ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹೆಲೋಟ್ ಅವರಿಗೆ ಕಾಂಗ್ರೆಸ್ ಎಂಎಲ್ಸಿಯಿಂದ ಅವಮಾನವಾಗಿದ್ದು ಸಾಂವಿಧಾನಿಕ ಹುದ್ದೆಗೆ ಕಾಂಗ್ರೆಸ್ ನಾಯಕರು ಕಪ್ಪುಚುಕ್ಕೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತವಾಯಿತು.ರಾಜ್ಯಪಾಲರು ಸಂವಿಧಾನಾತ್ಮಕ ಹುದ್ದೆಯಲ್ಲಿ ಇರುವವರುಅವರ ವಿರುದ್ಧ ಅಸಭ್ಯ ವರ್ತನೆ ಪ್ರಜಾಪ್ರಭುತ್ವಕ್ಕೆ ಧಕ್ಕೆ.ಸಂವಿಧಾನ ಗೌರವಿಸದವರಿಗೆ ವಿಧಾನಸಭೆಯಲ್ಲಿ ಸ್ಥಾನವಿಲ್ಲ ಎಂದು ಘೋಷಣೆ ಕೂಗಲಾಯಿತು.ಕಾಂಗ್ರೆಸ್ ಪಕ್ಷದ ಗೂಂಡಾ ಸಂಸ್ಕøತಿ ಮತ್ತೆ ಬಹಿರಂಗವಾಗಿದೆ.ರಾಜ್ಯ ಸರ್ಕಾರದ ಮೌನ ಸಂವಿಧಾನ ವಿರೋಧಿ ಎಂದು ಕಿಡಿಕಾರಿದ ಬಿಜೆಪಿ ನಾಯಕರು ತಕ್ಷಣವೇ ಎಂಎಲ್ಸಿ ಹರಿಪ್ರಸಾದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ ನೇತೃತ್ವವಹಿಸಿದ್ದರು.ಮಹೇಶರಡ್ಡಿ ಮುದ್ನಾಳ,
ಲಿಂಗಪ್ಪ ಹತ್ತಿಮನಿ, ಗೋವಿಂದಪ್ಪ ಕೊಂಚಟ್ಟಿ, ಬಸವರಾಜಪ್ಪ ಸೊನ್ನದ , ಮಲ್ಲಿಕಾರ್ಜುನ ಹೊನಗೇರಾ, ಮಲ್ಲು ಕೋಲಿವಾಡ,ಮಂಜುನಾಥ ಗುತ್ತೇದಾರ, ವಿಕಾಸ ಚವ್ಹಾಣ, ಚನ್ನಯ್ಯ ಸ್ವಾಮಿ,ಮಹಿಳಾ ಮೋರ್ಚಾ ಅಧ್ಯಕ್ಷೆ ಸುನೀತಾ ಚವ್ಹಾಣ,ವೀಣಾ ಮೋದಿ, ಸ್ನೇಹಾ ರಸಾಳಕರ್, ಭೀಮಬಾಯಿ ಶೇಂಡಗಿ,ಶಕುಂತಲಾ ಗುಂಜಲೂರು ಸೇರಿದಂತೆ ಅನೇಕ ಮಹಿಳಾ ಕಾರ್ಯಕರ್ತರ ಭಾಗಿಯಾದರು

























