Home ಜಿಲ್ಲೆ ಕಲಬುರಗಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಕಾಳಗಿ :ಮೇ.5: ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಗೆ ಬೀರಿದ ಹಿನ್ನೆಲೆಯಲ್ಲಿ ಕಾಳಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಎದುರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಪಕ್ಷದ ಪರವಾಗಿ ಜಯ ಘೋಷ ಮೊಳಗಿಸಿದರು.

ಈ ವೇಳೆ ಭೀಮರಾಯ ಮಲಘಾಣ ಮಾತನಾಡಿ ಅನೇಕ ವರ್ಷಗಳಿಂದ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅರಳಿದೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ಅವರ ಕಾರ್ಯವೈಖರಿಯಿಂದ ಬೇಸತ್ತಿದ್ದ ಬಂಗಾಳದ ಜನತೆ ನಿರೀಕ್ಷೆಯಂತೆ ಬಿಜೆಪಿಗೆ ಬೆಂಬಲಿಸಿದ್ದಾರೆ, ಈಗ ಅಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದರು.

ಶ್ರೀನಿವಾಸ ಗುರುಮಿಠಕಲ್, ಪ್ರಶಾಂತ ಕದಂ, ಪುರುಷೋತ್ತಮ ಗುತ್ತೇದಾರ, ಗಣೇಶ ಸಿಂಗಶೇಟ್ಟಿ, ಸುಂದರ ಸಾಗರ, ರಾಜೇಂದ್ರಬಾಬು ಹೀರಾಪೂರಕರ್, ಸೂರ್ಯಕಾಂತ ಕಟ್ಟಿಮನಿ, ಶರಣಪ್ಪ ಕಿಟ್ಟದ, ದೇವಿಂದ್ರ ಕದಂ, ಈರಣ್ಣ ಟೆಂಗಳಿಕರ, ನಾಗರಾಜ ಪಾಟೀಲ, ಹಣಮಂತ ಸೇಗಾಂವಕರ, ಸುರೇಶ ಸೇಗಾಂವಕರ, ರಾಮು ರಾಠೋಡ, ಬಲರಾಮ ವಲ್ಲ್ಯಾಪುರ, ಸಚೀನ ಉಳಗಡ್ಡಿ, ಕಾಶೀನಾಥ ರಾಜಾಪುರ, ಇಂದ್ರಜೀತ ಕಟ್ಟಿಮನಿ, ಶೇಖರ ದಂಡೋತಿ, ಕಾಳಪ್ಪ ಕೋಯಿ ಸೇರಿದಂತೆ ಅನೇಕರಿದ್ದರು.