Home ಜಿಲ್ಲೆ ಬೆಂಗಳೂರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ಕಿಡಿ

ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ಕಿಡಿ

ಚಿಕ್ಕಬಳ್ಳಾಪುರ,ಜೂ.೩೦ : ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದು, ಇಲ್ಲಿನ ಮತದಾರರು ಸಹ ಅತ್ಯಂತ ಪ್ರಬುದ್ಧರು,ಇಂತಹ ಪ್ರಬುದ್ಧ ಮತದಾರರಿಂದ ಆಯ್ಕೆಗೊಂಡ ಶಾಸಕ ಪ್ರದೀಪ್ ಈಶ್ವರ್ ತಮ್ಮ ಮೇಲೆ ಮತದಾರರು ಇಟ್ಟ ನಂಬಿಕೆಗೆ ಚುತಿ ತರದೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಭಾರತೀಯ ಜನತಾ ಪಕ್ಷ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ದಿನ ನಡೆದ ಘಟನೆಯಲ್ಲಿ ಶಾಸಕರು ನಡೆದುಕೊಂಡ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿ ಅಲ್ಲ ಎಂದು ತಿಳಿಸಿದರು.


ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಉತ್ತಮ ಆಡಳಿತಕ್ಕಾಗಿ ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ.ಇದನ್ನು ಚಿಕ್ಕಬಳ್ಳಾಪುರ ಶಾಸಕರು ತಿಳಿದುಕೊಳ್ಳಬೇಕಿತ್ತು.ಆದರೆ ಅವರು ಶ್ರೀಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೇ ನಡೆದುಕೊಂಡ ರೀತಿ ಮೂರು ದಿನಗಳಿಂದಲೂ ಜಿಲ್ಲೆಯಲ್ಲಿ ಶಾಂತಿ ವಾತಾವರಣ ಕದಡಿದೆ ಇದು ಸರಿ ಅಲ್ಲ ಎಂದರು.


ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಶಾಸಕರೇ ತಮ್ಮ ಹೊಣೆ ಅರಿತುಕೊಳ್ಳದೆ ಶಾಂತಿ ಕದಡುವಂತೆ ವರ್ತಿಸಬಾರದಿತ್ತು.ಅವರ ವರ್ತನೆಯ ಕಾರಣದಿಂದಾಗಿ ಇಡೀ ರಾಜ್ಯದಲ್ಲಿ ಇಂದು ಚಿಕ್ಕಬಳ್ಳಾಪುರಕ್ಕೆ ಇರುವ ಘನತೆಗೆ ಕುಂದು ಉಂಟಾದಂತಾಗಿದೆ ಎಂದರು.


ಜಿಲ್ಲಾ ಕೇಂದ್ರದಲ್ಲಿ ವೈಯಕ್ತಿಕ ದ್ವೇಷ ವೈಶಮ್ಯಗಳನ್ನು ಜನಸಾಮಾನ್ಯರು ಹೊಂದದೆ ಜಿಲ್ಲೆಯಲ್ಲಿ ಮತ್ತೆ ಶಾಂತಿಯುತ ವಾತಾವರಣ ಮೂಡುವಂತೆ ಆಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.