
ಯಾದಗಿರಿ: ಡಿ.೨೫:ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ-೨೦೨೫ ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಇದನ್ನು ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅವರು, ಈ ವಿಧೇಯಕವು ಸಂವಿಧಾನದ ೧೯(೧)ರಡಿ ನಾಗರಿಕರಿಗೆ ನೀಡಿರುವ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಕಿತ್ತುಕೊಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಕಾಂಗ್ರೆಸ್ ಸರ್ಕಾರ ನಾಶಪಡಿಸಲು ಮುಂದಾಗಿದೆ ಎಂದು ಅವರು ಹೇಳಿದರು.
ದ್ವೇಷ ಭಾಷಣಕ್ಕೆ ವಿಧೇಯಕದಲ್ಲಿ ನೀಡಿರುವ ವ್ಯಾಖ್ಯಾನ ಅಸ್ಪಷ್ಟವಾಗಿದ್ದು, ಸರ್ಕಾರದ ವಿರುದ್ಧದ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಹಾಗೂ ಸತ್ಯವಾಚನವನ್ನೂ ದ್ವೇಷವೆಂದು ಪರಿಗಣಿಸುವ ಅಪಾಯವಿದೆ. ಇದು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಯುವ ಮುಖಂಡ ಮಹೇಶ್ ಗೌಡ ಮುದ್ನಾಳ ಮಾತನಾಡಿ
ಈ ಕಾಯ್ದೆಯಡಿ ಪೊಲೀಸರಿಗೆ ಅತಿಯಾದ ಹಾಗೂ ನಿರಂಕುಶ ಅಧಿಕಾರ ನೀಡಲಾಗುತ್ತಿದ್ದು, ಪ್ರತಿಬಂಧಕ ಕ್ರಮಗಳ ನೆಪದಲ್ಲಿ ಶಾಂತಿಯುತ ಪ್ರತಿಭಟನೆಗಳು, ಸಭೆಗಳು ಹಾಗೂ ಸಾಮಾಜಿಕ ಚಳುವಳಿಗಳನ್ನು ತಡೆಯುವ ದುರುದ್ದೇಶ ಅಡಗಿದೆ ಎಂದು ಆರೋಪಿಸಲಾಯಿತು.
ವಿಶೇಷವಾಗಿ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಹೆಚ್ಚಿನ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರವು ಈ ವಿಧೇಯಕದ ಮೂಲಕ ಪ್ರತಿಪಕ್ಷಗಳು, ಮಾಧ್ಯಮ ಮತ್ತು ಸಂಘ-ಸAಸ್ಥೆಗಳ ಮೇಲೆ ನಿಯಂತ್ರಣ ಹೇರುವ ಹಾಗೂ ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕಾಯ್ದೆಯನ್ನು ಜಾರಿಗೊಳಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ, ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಾಂತಿಯುತ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಸಿದ್ದಣಗೌಡ ವಡಗೇರಾ, ದೇವಿಂದ್ರನಾಥ ನಾದ್, ಪರಶುರಾಮ ಕುರುಕುಂದಾ, ವಿಲಾಸ್ ಪಾಟೀಲ್, ಶ್ರೀಧರ್ ಸಾಹುಕಾರ್ ಮಲ್ಲು ಕೊಲಿವಾಡ ಮಂಜುನಾಥ್ ಗುತ್ತೇದಾರ,ಸುರೇಶ್ ಅಂಬಿಗೇರ್, ಸ್ವಾಮಿದೇವ ದಾಸನಕೇರಿ, ಲಿಂಗಪ್ಪ ಹತ್ತಿಮನಿ, ಡಾ. ಶರಣಗೌಡ ಕೊಡ್ಲಾ, ಬಸವರಾಜ ಸೊನ್ನದ್, ವೆಂಕಟರೆಡ್ಡಿ ಮಾಲಿ ಪಾಟೀಲ, ಶಿವಣ್ಣ ದೊಡ್ಡಮನಿ, ರಾಜಶೇಖರ್ ಕಾಡಮಗೇರಾ, ಸುನಿತಾ ಚವ್ಹಾಣ, ವೀಣಾ ಮೋದಿ, ಸ್ನೇಹ ರಾಸಳಕರ್ ಪ್ರಭಾವತಿ ಕಲಾಲ ವೆಂಕಟರಡ್ಡಿ ಅಬ್ಬೆತುಮಕೂರ, ಪ್ರಭಾವತಿ ಕಲಾಲ್, ರುಕಿಯಾ ಬೇಗಂ ಭೀಮ ಬಾಯಿ ಸೆಂಡಗಿ ಕರೆಮ್ಮ ಬೀಮಣಗೌಡ ಕ್ಯಾತನಾಳ, ಗೋವಿದಪ್ಪ ಕೊಂಚಟ್ಟಿ, ರಮೇಶ ದೊಡ್ಡಮನಿ,ಅನಿಲ್ ಕರಾಟೆ ಮಲ್ಲಿಕಾರ್ಜುನ ಕಟ್ಟಿಮನಿ, ಜಿತೇಂದ್ರ ನವಿಲುಗರಿ, ಚಂದ್ರಶೇಖರ ಕಡೆಸುರ ರಾಜಶೇಖರ ಸ್ವಾಮಿ, ಶ್ರೀನಾಥ ಜೈನ್, ರಾಚಯ್ಯ ಸ್ವಾಮಿ ಶ್ರೀಕಾಂತ್ ಸುಂಗುಲ್ಕರ್ ಸಾಬು ಚಂದ್ರಕಿ, ಶರಣಗೌಡ ಐಕೂರ, ಗೋಪಾಲ ದಾಸನಕೇರಿ, ದೇವಿಂದ್ರಪ್ಪ, ರಾಮು ರಾಠೋಡ, ಶಿವಣ್ಣ ಬಡಿಗೇರ, ಮಹೇಶ ನಕಲ್, ಪವನ್ ಲಿಂಗೇರಿ, ಅಜಯ್ ಕುಮಾರ್ ಮಡ್ಡಿ, ಶರಣಗೌಡ, ಸುಗುರೇಶ್ ಚಾಮ, ಲಕ್ಷ್ಮಿ ಕಾಂತ್ ಮಾಲಿಪಾಟೀಲ ಸೇರಿದಂತೆ ಅನೇಕ ಮುಖಂಡರು, ನಾಯಕರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು























