Home ಜಿಲ್ಲೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಬಿಜೆಪಿ ಮುಖಂಡರ ಆರೋಪ ರಾಜಕೀಯ ದ್ವೇಷದ್ದು

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಬಿಜೆಪಿ ಮುಖಂಡರ ಆರೋಪ ರಾಜಕೀಯ ದ್ವೇಷದ್ದು

ಯಾದಗಿರಿ :ಫೆ.೨೧: ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ಮುಖಂಡರು ಮಾಡುತ್ತಿರುವ ಆರೋಪಗಳು ಸಂಪೂರ್ಣ ರಾಜಕೀಯ ದ್ವೇಷದಿಂದ ಕೂಡಿದ್ದು, ಜನರ ದಿಕ್ಕುತಪ್ಪಿಸುವ ಪ್ರಯತ್ನ ಮಾತ್ರ ಎಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯನಿರತ ಮತ್ತು ಅಭಿವೃದ್ಧಿಗೆ ಬದ್ಧತೆಯುಳ್ಳ ನಾಯಕರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಅವರು ಜಾರಿಗೆ ತಂದಿರುವ ಯೋಜನೆಗಳು ಗ್ರಾಮ ಮಟ್ಟದಲ್ಲಿ ಫಲ ನೀಡುತ್ತಿವೆ. ಅದೇ ರೀತಿ ಐಟಿ-ಬಿಟಿ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಣೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ,” ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಪ್ರಗತಿಗೆ ಖರ್ಗೆ ಕುಟುಂಬದ ಕೊಡುಗೆ ಅಪಾರವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ದೀರ್ಘಕಾಲದ ಹೋರಾಟ ಹಾಗೂ ಪ್ರಿಯಾಂಕ್ ಖರ್ಗೆ ಅವರ ಚುರುಕಿನ ನಾಯಕತ್ವದಿಂದ ೩೭೧(ಜೆ) ವಿಶೇಷ ಸ್ಥಾನಮಾನ ಜಾರಿಗೆ ಬಂದು, ಈ ಭಾಗದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಹೆಚ್ಚಿನ ಅವಕಾಶಗಳು ದೊರೆತಿವೆ ಎಂದು ಅನಪುರ್ ವಿವರಿಸಿದರು.

ಕಲಬುರಗಿನಲ್ಲಿ ಇಎ???ಸಿ ವೈದ್ಯಕೀಯ ಕಾಲೇಜು ಮತ್ತು ಆಧುನಿಕ ಆಸ್ಪತ್ರೆ ಸ್ಥಾಪನೆ, ವಿಮಾನ ನಿಲ್ದಾಣ ಕಾರ್ಯಾರಂಭ, ಹೊಸ ರೈಲ್ವೆ ಮಾರ್ಗಗಳ ಅನುಷ್ಠಾನ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ-ಚಿಟಟವು ಈ ಭಾಗದ ಜನತೆಗೆ ದೊರೆತ ಮಹತ್ವದ ಸೌಲಭ್ಯಗಳಾಗಿವೆ. ಇವುಗಳಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಭವಿಷ್ಯದ ದಾರಿಗಳು ತೆರೆದಿವೆ ಎಂದು ಅವರು ಹೇಳಿದರು.

“ಜನಪರ ಕೆಲಸಗಳಿಂದ ಪ್ರಿಯಾಂಕ್ ಖರ್ಗೆ ಅವರು ಗಳಿಸಿರುವ ವಿಶ್ವಾಸವನ್ನು ಸಹಿಸಲಾಗದೆ, ಬಿಜೆಪಿ ನಾಯಕರು ಅನಾವಶ್ಯಕ ಟೀಕೆಗಳ ಮೂಲಕ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆದರೆ ಜನರು ಸತ್ಯವನ್ನು ಅರಿತಿದ್ದಾರೆ,” ಎಂದು ಅನಪುರ್ ಕಿಡಿಕಾರಿದರು.

ಆರೋಪ ಮಾಡುವ ಮೊದಲು ಬಿಜೆಪಿ ನಾಯಕರು ತಮ್ಮ ಆಡಳಿತಾವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿದ ಸ್ಪಷ್ಟ ಕೊಡುಗೆಗಳನ್ನು ಜನತೆಗೆ ವಿವರಿಸಲಿ. ರಾಜಕೀಯ ಆರೋಪಗಳಿಂದ ಅಭಿವೃದ್ಧಿ ತಡೆಯಲಾಗದು.”

  • ಬಸರೆಡ್ಡಿ ಅನಪುರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಯಾದಗಿರಿ.