
(ಸಂಜೆವಾಣಿ ವಾರ್ತೆ)
ಕೂಡ್ಲಿಗಿ. ಮೇ. 23 :- ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಸಂಡೂರು ಉಪಚುನಾವಣೆಯ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಅವರ ತಂದೆ ಸಾರಿಗೆ ಸಂಸ್ಥೆ ನಿವೃತ್ತ ಚಾಲಕ ಬಂಗಾರು ಸೋಮಣ್ಣ (73) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಸಂಜೆ 6-30ಗಂಟೆಗೆ ನಿಧನರಾಗಿದ್ದಾರೆ.
ಅವರು ಪತ್ನಿ ಕೂಡ್ಲಿಗಿ ಪ ಪಂ ಸದಸ್ಯೆ ಬಂಗಾರು ಹುಲಿಗೆಮ್ಮ ಹಾಗೂ ಮಕ್ಕಳಾದ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು,ಬಂಗಾರು ಅನಿಲಕುಮಾರ ಹಾಗೂ ಬಂಗಾರು ಮಂಜುನಾಥ ಅವರುಗಳನ್ನು ಮತ್ತು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬಂಗಾರು ಸೋಮಣ್ಣ ಸಾರಿಗೆ ಸಂಸ್ಥೆಯಲ್ಲಿ ಕೂಡ್ಲಿಗಿ ಘಟಕ ಸೇರಿದಂತೆ ಇತರೆಡೆ ಚಾಲಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಮೂರುವರ್ಷದ ಹಿಂದಷ್ಟೇ ನಿವೃತ್ತಿ ಹೊಂದಿದ್ದರು ಮಧುಮೇಹ ಖಾಯಿಲೆಯಿಂದ ಕಿಡ್ನಿ ವೈಫಲ್ಯದಿಂದ ಆರೋಗ್ಯದ ಸಮಸ್ಯೆ ಕಾಡಿದ್ದರಿಂದ ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಗುರುವಾರ ಸಂಜೆ ಸೋಮಣ್ಣ ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ ಇವರ ಆರೋಗ್ಯ ವಿಚಾರಿಸಲು ದಾಖಲಾಗಿದ್ದ ಆಸ್ಪತ್ರೆಗೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಸೇರಿದಂತೆ ಇತರೆ ಬಿಜೆಪಿ ಮುಖಂಡರು, ರಾಜ್ಯದ ಮಾಜಿ ಮಂತ್ರಿ ಹಾಲಿ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಸೇರಿದಂತೆ ಜನಾರ್ಧನ ರೆಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯೇಂದ್ರ ಛಲವಾದಿ ನಾರಾಯಣಸ್ವಾಮಿ ಸೇರಿ ಇತರರು ಮತ್ತು ಲಿಂಗಾಯತ ಹಾಗೂ ವಾಲ್ಮೀಕಿ ಸ್ವಾಮೀಜಿ ಗಳು ಸಹ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಇಂದು ಕೂಡ್ಲಿಗಿಯಲ್ಲಿ ಅಂತ್ಯಕ್ರಿಯೆ : ಬಂಗಾರು ಸೋಮಣ್ಣ ಅವರ ಅಂತ್ಯಕ್ರಿಯೆಯನ್ನು ಕೂಡ್ಲಿಗಿ ಪಟ್ಟಣದ ಹೈವೇ 50ರ ಸಮೀಪದ ಸ್ವಂತ ಜಮೀನಿನಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಯಿತು. ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ, ಮಾಜಿ ಸಚಿವ ಶ್ರೀರಾಮುಲು, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ ನಾಯ್ಕ್,ಸೇರಿದಂತೆ ಇತರೆ ರಾಜಕೀಯ ಮುಖಂಡರು ಗಣ್ಯರು ಹಾಗೂ ಬಂಗಾರು ಹನುಮಂತು ಅಭಿಮಾನಿ ಬಳಗ ಬಂಗಾರು ಸೋಮಣ್ಣ ಅವರ ಅಂತಿಮ ದರ್ಶನ ಪಡೆದರು ನೂರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ವರದಿ : ಬಿ.ನಾಗರಾಜ್ ಕೂಡ್ಲಿಗಿ.