ಕೋಲಾರ,ಆ,೭:ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ಸಂಪೂರ್ಣ ವೈಫಲ್ಯತೆಯಿಂದ ಕೊಡಿದೆ. ಎಲ್ಲೆಡೆ ಭ್ರಷ್ಟಚಾರ, ಪ.ಜಾ. ಪ.ಪಂ.ಗಳಿಗೆ ಅನ್ಯಾಯ,ಬಡಜನತೆಗಳ ಮೇಲೆ ತೆರಿಗೆ ಹೊರೆ, ಸೇರಿದಂತೆ ಜನ ವಿರೋಧಿ ಆಡಳಿತವನ್ನು ಖಂಡಿಸಿ ಆ,೧೧ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಗರ ಹೊರವಲಯದಲ್ಲಿ ಜಿಲ್ಲಾ ಆಡಳಿತ ಕಚೇರಿಗೆ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು,
ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಟಾನದ ನೆಪದಲ್ಲಿ ಬೋವಿ ಅಭಿವೃದ್ದಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ವಾಲ್ಮೀಕಿ ಅಭಿವೃದ್ದಿ ಮಂಡಳಿ, ಆದಿಜಾಂಭವ ಅಭಿವೃದ್ದಿ ಮಂಡಳಿ ಸೇರಿದಂತೆ ಎಲ್ಲಾ ಅಭಿವೃದ್ದಿ ನಿಗಮ ಮಂಡಳಿಗಳಿಗೆ ಮಂಜೂರು ಮಾಡಿದ್ದ ಅನುದಾನಗಳನ್ನು ಅಭಿವೃದ್ದಿ ಕಾರ್ಯಗಳಿಗೆ ಬಳಿಸದೆ ಗ್ಯಾರೆಂಟಿ ಯೋಜನೆಗಳಿಗೆ ದುರ್ಬಳಿಸಿ ಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು ಕೊಡಲೇ ಬಜೆಟ್‌ನಲ್ಲಿ ಮೀಸಲಿಟ್ಟದ್ದ ಅನುದಾನಗಳನ್ನು ದುರ್ಬಳಿಸಿ ಕೊಂಡಿರುವುದನ್ನು ವಾಪಾಸ್ ಮಾಡ ಬೇಕೆಂದು ಆಗ್ರಹ ಪಡೆಸಿ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಸಚಿವ ಮಹಾದೇವಪ್ಪ ಅವರು ಕೆ.ಆರ್.ಎಸ್. ಡ್ಯಾಮ್‌ಗೆ ಶಿಲನ್ಯಾಸ ಮಾಡಿದ್ದು ಟಿಪ್ಪು ಸುಲ್ತಾನ್ ಎಂದು ತಪ್ಪು ಮಾಹಿತಿ ನೀಡಿ ಇತಿಹಾಸವನ್ನು ತಿರುಚಲು ಪ್ರಯತ್ನಿಸಿರುವುದನ್ನು ಖಂಡಿಸುತ್ತೇವೆ, ಮೈಸೂರು ಮಹಾರಾಜರ ಕುಟುಂಬದ ಮೇಲಿರುವ ದ್ವೇಷಕ್ಕೆ ಸಿದ್ದರಾಮಯ್ಯನವರು ಮಹಾದೇವಪ್ಪ ಅವರ ಬಾಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ಕೊಡಿಸಿ ಲಾಭ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ. ಈ ಸಂದೇಶವು ಮಕ್ಕಳ ಭವಿಷ್ಯದಲ್ಲಿ ಪರಿಣಾಮ ಬೀರಲಿದೆ. ಇದನ್ನು ಮೈಸೂರು ಮಹಾರಾಜರು ತಮ್ಮ ಕುಟುಂಬದವರ ಚಿನ್ನದ ಅಭರಣಗಳನ್ನು ಒತ್ತ ಇಟ್ಟು ತಂದ ಹಣದಿಂದ ಕೆ.ಆರ್.ಎಸ್. ಡ್ಯಾಮ್ ಪೂರ್ಣಗೊಳಿಸಿದರು ಎಂಬುವುದು ಇತಿಹಾಸವಾಗಿದೆ. ಇವರ ಹೇಳಿಕೆ ಪ್ರಕಾರವೇ ೧೦೦ ವರ್ಷಗಳ ಅಂತರವಿದೆ. ಅದಾಗ್ಯೂ ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರವು ಹಾಸ್ಯಸ್ಪದಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಆರೋಪಿಸಿದರು,
ಸಾರ್ವಜನಿಕರ ಮೂಲ ಭೂತ ಸೌಲಭ್ಯಗಳಾದ ಶಿಕ್ಷಣ, ರಸ್ತೆ. ಆಹಾರ, ನೀರು, ದೀಪ, ವಸತಿ, ಉದ್ಯೋಗ ,ಕೈಗಾರಿಕೆಗಳು ಸೇರಿದಂತೆ ವಿವಿಧ ಅಭಿವೃದ್ದಿಗಳಿಗೆ ಮಂಡಳಿ, ನಿಗಮದ ಅನುದಾನಗಳನ್ನು ಪ್ರಮಾಣಿಕವಾಗಿ ಬಳಿಸದೆ ವಂಚಿಸಿ ಗ್ಯಾರೆಂಟಿಗಳಿಗೆ ದುರ್‍ಬಳಿಸಿ ಕೊಂಡಿದೆ. ಗ್ಯಾರೆಂಟಿ ಅನುಷ್ಠಾನಗೊಳಿಸಲು ಇವರಿಗೆ ಎಸ್.ಸಿ. ಎಸ್.ಟಿ. ಹಾಗೂ ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳ ಅನುದಾನವೇ ಬೇಕಾಗಿತ್ತೆ ? ಬೇಕಿದ್ದರೆ ಬೇರೆ ವರ್ಗಗಳ ನಿಗಮ, ಮಂಡಳಿಗಳು,ಬೋರ್ಡ್‌ಗಳು ಬೇಕಾದಷ್ಟು ಇತ್ತಲ್ಲ ಅವುಗಳ ಅನುದಾನ ಏಕೆ ಮುಟ್ಟಿಲ್ಲ ? ಬಡಜನತೆಯ ಅಭಿವೃದ್ದಿ ಅನುದಾನವೇ ಬೇಕಾಗಿತ್ತೇ ? ಎಂದು ಪ್ರಶ್ನಿಸಿದರು.
ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ದಂತೆ ಸರ್ಕಾರಿ ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿ ಮಾಡಿ ಕೊಂಡಿದ್ದಾರೆ. ಎನ್.ಡಿ.ಎ ಪಕ್ಷವನ್ನು ಗುರಿಯಾಗಿಸಿ ಕೊಂಡು ಸಾಮಾನ್ಯ ಮುಖಂಡರುಗಳ ಮೇಲೆ ದಾಳಿ ಮಾಡಿಸುತ್ತಿರುವುದನ್ನು ಖಂಡಿಸುತ್ತೇವೆ. ಪಟ್ಟಣ ಪಂಚಾಯಿತಿ ಮಾಡಲು ಅನುಮೋದನೆ ನೀಡಿದ್ದು ಆಗಿನ ಬಿಜೆಪಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೊರಪ್ಪನವರು, ಅಗಾ ಮಂಜೂರು ಮಾಡಿದ್ದ ಬಿಜೆಪಿ ಕಾಮಗಾರಿಗಳೇ ಈಗಿನ ಸರ್ಕಾರವು ಮುಂದುವರೆಸುತ್ತಿದೆ. ಪ್ರಸ್ತುತ ಸರ್ಕಾರವು ಏನಿದ್ದರೂ ಗುದ್ದಲಿ ಪೂಜೆಗಳಿಗೆ ಮಾತ್ರ ಸೀಮಿತವಾಗಿದ್ದು ಪುಕ್ಕಟೆ ಪ್ರಚಾರ ಪಡೆಯುತ್ತಿದೆ. ಕಾಂಗ್ರೇಸ್ ಪಕ್ಷದವರು ಕ್ಷೇತ್ರಕ್ಕೆ ೧೦೦ ಕೋಟಿ ತಂದಿದ್ದೇನೆ, ೨೦೦ ಕೋಟಿ ತಂದಿದ್ದೇನೆ ಎಂದು ಉಡಾಫೆ ಬಿಡುವ ಮೂಲಕ ಚುನಾವಣೆಯಲ್ಲಿ ಮತದಾರರನ್ನು ಯಾಮಾರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ ಬೆಲೆ ಏರಿಕೆಗಳು ಲಂಗುಲಾಗಮೂ ಇಲ್ಲದಂತಾಗಿದೆ ಪ್ರಟೋಲ್, ಡಿಸೇಲ್, ದಿನಸಿಗಳು, ವಿದ್ಯುತ್, ಸಾರಿಗೆ. ಮುದ್ರಣ, ನೀರಿನ ತೆರಿಗೆ, ಕಂದಾಯಗಳು, ಹಾಲಿನ ದರ ಸೇರಿದಂತೆ ಎಲ್ಲವನ್ನು ಏರಿಕೆ ಮಾಡಿ ೧೦೧ ಕೋಟಿ ರೂ ಸಂಗ್ರಹಿಸುವ ಗುರಿ ಹೊಂದಿದೆ. ಮುಂದೆ ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬರುವುದಿಲ್ಲ ಎಂಬುವುದನ್ನು ಅರಿತಿದೆ. ಅಧಿಕಾರದಲ್ಲಿ ಇರುವಷ್ಟು ಕಾಲ ಸಿಕ್ಕಿದಷ್ಟು ದೋಚಿ ಕೊಂಡು ಹೋಗಲು ತೀರ್ಮಾನಿಸಿದಂತೆ ಇದೆ. ಹಾಗಾಗಿಯೇ ರಾಜ್ಯವನ್ನು ಸಿಕ್ಕಿದಂತೆ ಭ್ರಷ್ಟಚಾರಗಳ ಮೂಲಕ ಲೊಟಿ ಹೊಡೆಯುತ್ತಿದೆ ಎಂದು ದೂರಿದರು.
ಇದೇ ಆಗಸ್ಟ್ ೧೪ರಂದು ಬಿಜೆಪಿಯ ಮೋರ್ಚಾ ಸಂಘಟನೆಗಳ ನೇತ್ರತ್ವದಲ್ಲಿ ಹರ್ ಗರ್ ತಿರಂಗ್ ನೆನಪಿನಾರ್ಥವಾಗಿ ಮೌನ ಪ್ರತಿಭಟನೆ, ಬೈಕ್ ರ್‍ಯಾಲಿಯನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸ ಬೇಕು .ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಎಲ್ಲರೂ ಗೌರವಿಸುವಂತಾಗ ಬೇಕು ಎಂದು ತಿಳಿಸಿದ ಅವರು ಈ ಹಿಂದೆ ಅತಿ ಉದ್ದದ ರಾಷ್ಟ್ರ ಧ್ವಜಾವನ್ನು ಆ ೧೫ ರಂದು ಪ್ರದರ್ಶಿಸುವ ಮೂಲಕ ಗಿನ್ನಿಸ್ ದಾಖಲೆಯನ್ನು ನೆನಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ವಕೀಲ ಪ್ರಕೋಷ್ಠದ ರಾಜ್ಯಾಧ್ಯಕ್ಷ ವಸಂತ ಕುಮಾರ್, ಮುಖಂಡರಾದ ಸಿ.ಡಿ.ರಾಮಚಂದ್ರ, ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಹಾರೋಹಳ್ಳಿ ವೆಂಕಟೇಶ್, ವಕೀಲರಾದ ಮಂಜುನಾಥ್, ನಾಗೇಂದ್ರ, ಓಹೀಲೇಶ್, ಮುಳಬಾಗಿಲು ಸುಂದರ್, ಮಹೇಶ್, ರಾಜೇಶ್ ಸಿಂಗ್, ನಾಮಾಲ ಮಂಜುನಾಥ್ ಮುಂತಾದವರು ಇದ್ದರು.

























