ಕೋಲಾರ,ಆ.೨೧- ಪ್ರಧಾನ ಮಂತ್ರಿ.ನರೇಂದ್ರ ಮೋದಿ ಮತ್ತು ಜೆಡಿಎಸ್ ವರಿಷ್ಟರಾದ ಹೆಚ್.ಡಿ.ದೇವೆಗೌಡ, ಕೇಂದ್ರ ಸಚಿವ .ಹೆಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್‌ನ ಯುವ ರಾಜ್ಯಧ್ಯಕ್ಷ ನಿಖಿಲ್ ಕುಮಾರ್‌ಸ್ವಾಮಿ ರವರುಗಳ ನೇತೃತ್ವದ ಎನ್‌ಡಿಎ ಮೈತ್ರಿ ಪಕ್ಷವು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ನಂತರ ಮೊಟ್ಟ ಮೊದಲಬಾರಿಗೆ ಸ್ಥಳೀಯ ಸಂಸ್ಥೆಯಾದ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಎದುರಿಸಿ, ಬಿ.ಜೆ.ಪಿಯ ಪಕ್ಷದ ೬ ಅಭ್ಯರ್ಥಿಗಳು, ಜೆ.ಡಿ.ಎಸ್‌ನ ೪ ಅಭ್ಯರ್ಥಿಗಳು ಹಾಗೂ ಬೆಂಬಲಿತ ೧ ಪಕ್ಷೇತರ ಅಭ್ಯರ್ಥಿ ಜಯಗಳಿಸಿರುತ್ತಾರೆ.
ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳು ಒಟ್ಟಾರೆಯಾಗಿ ಚುನಾವಣೆಯನ್ನು ಏಕಪಕ್ಷೀಯವಾಗಿ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಸಂಘಟಿಸಿ ಗೆಲುವನ್ನು ಸಾಧಿಸಿರುವುದು ಅತ್ಯಂತ ಸಂತೋಷಕರ ಸಂಗತಿಯಾಗಿದೆ.
ಈ ಗೆಲುವು ಸಾಧಿಸಲು ಹಗಲಿರುಳು ಶ್ರಮವಹಿಸಿದ ಎಲ್ಲಾ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಹಾಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಕಾರವನ್ನು ನೀಡಿದಲ್ಲಿ ಇಂತಹ ಚುನಾವಣೆಗಳಲ್ಲಿ ಜಯವು ನಿಶ್ಚಿತವಾಗಿರುತ್ತದೆ.
ಜಯಗಳಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಎಂ.ಎಲ್.ಸಿ ಇಂಚರ ಗೋವಿಂದರಾಜು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

























