
ಬೀದರ :ಏ.೭: ನಗರದ ನೌಬಾದನಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಇಂದು ಬೆಳಿಗ್ಗೆ ೮.೩೦ ಗಂಟೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸೋಮನಾಥ ಪಟೀಲ ಅವರು ಪಕ್ಷದ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಬಿಜೆಪಿ ನಾಯಕ ಈಶ್ವರ ಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಪವಾರ, ರಾಜಕುಮಾರ ನೇಮತಾಬಾದ, ಸುಭಾಷ ಮಡಿವಾಳ, ನಗರ ಘಟಕ ಅಧ್ಯಕ್ಷರಾದ ಶಶಿ ಹೊಸಳ್ಳಿ ಗ್ರಾಮಾಂತರ ಘಟಕದ ಅಧ್ಯಕ್ಷರಾದ ದೀಪಕ ಗಾದಗೆ , ಶ್ರೀಮತಿ ಶಂಕುತಲಾ ಬೆಲ್ದಾಳೆ, ಉಲ್ಲಾಸನಿ ಮುದಾಳೆ, ಮಹಾನಂದ ಪಾಟೀಲ, ವಿಜಯಲಕ್ಷಿö್ಮÃ ಕೌಡಗೆ, ರಾಜಶೇಖರ ನಾಗಮೂರ್ತಿ ಬಾಬುರಾವ ಕಾರುಬಾರಿ ವೀರು ದಿಗ್ವಾಲ್ , ಉಪೇಂದ್ರ ದೇಶಪಾಂಡೆ, ರೋಶನ್ ವರ್ಮಾ, ಗಣೇಶ ಭೋಸ್ಲೆ, ರಾಜೇಂದ್ರ್ ಪೂಜಾರಿ ಶ್ರೀನಿವಾಸ ಚೌದರಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ಬಿಜೆಪಿ ಸಂಸ್ಥಾಪನ ದಿನಾಚರಣೆ ನಿಮಿತ್ತ ಜಿಲ್ಲಾ ಕಚೇರಿಗೆ ವಿದ್ಯುತ್ ದೀಪಲಾಂಕರ ಮಾಡಲಾಯಿತು.




















