ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ:ಪರಂ ರಾಜೀನಾಮೆಗೆ ಬಿಜೆಪಿ ಆಗ್ರಹ

ಕೋಲಾರ,ಜ,೧೩- ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆ ಸುಜಾತ ಹಂಡಿ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಬಿಜೆಪಿ ಮಹಿಳಾ ಮೋರ್ಜಾ ನೇತ್ರತ್ವದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೇಸ್ ಸರ್ಕಾರದ ಗೃಹ ಮಂತ್ರಿ ರಾಜಿನಾಮೇ ನೀಡಲು ಒತ್ತಾಯಿಸಿ ರಾಜ್ಯ ಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು,


ನಗರ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿಯ ಅವರಣದಲ್ಲಿ ಸಂಘಟಿತರಾದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಬಾವುಟಗಳನ್ನು ಹಿಡಿದು ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆಗಳು ಕೊಗಿದರು.


ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅರುಣಮ್ಮ ,ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕೆ.ಜಿ.ಎಫ್ ಅಶ್ವಿನಿ ಸಂಪಂಗಿ ಮಾತನಾಡಿ ಜನ ೫ ರಂದು ಹುಬ್ಬಳಿಯಲ್ಲಿ ನಡೆದ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತ ಹುಂಡಿಯವರನ್ನು ಮಧ್ಯರಾತ್ರಿ ೨ ಗಂಟೆಯಲ್ಲಿ ಮನೆಗೆ ಹೋಗಿ ಬಂಧಿಸಿದ್ದಾರೆ. ಅಲ್ಲದೆ ಮಹಿಳೆಯನ್ನು ಬಂಧಿಸುವ ಸಂದರ್ಭಧಲ್ಲಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದರು.


ಮಹಾತ್ಮಗಾಂಧಿಜೀಯವರ ಕನಸಿನಂತೆ ಸ್ವಾತಂತ್ರ್ಯ ಬಂದರೂ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಮಹಿಳೆಯರನ್ನು ರಕ್ಷಿಸ ಬೇಕಾದ ಪೊಲೀಸರೇ ದೌರ್ಜನ್ಯ ನಡೆಸಿದರೆ ಮಹಿಳೆಯರಿಗೆ ಯಾರು ರಕ್ಷಣೆ ನೀಡುತ್ತಾರೆ. ಮಹಿಳೆಯರಿಗೆ ರಕ್ಷಣೆ ನೀಡದ ಸರ್ಕಾರ ಹಾಗೂ ಸಚಿವರು ಇದ್ದರೆಷ್ಟೂ ಹೋದರೆಷ್ಟು ಅವರ ಕೈಯಲ್ಲಿ ಮಹಿಳೆಯರಿಗೆ ರಕ್ಷಣೆ ಸಾಧ್ಯವಾಗದಿದ್ದರೆ ರಾಜಿನಾಮೆ ನೀಡಿ ತೊಲಗಲಿ ಎಂದು ಅಕ್ರೋಶ ವ್ಯಕ್ತಪಡಿಸಿದರು,


ಮಹಿಳೆಯರಿಗೆ ಗೌರವ ನೀಡ ಬೇಕಾದ ಸಮಾಜದಲ್ಲಿ ರಾಜಕೀಯ ದ್ವೇಷಕ್ಕಾಗಿ ಒಬ್ಬ ಮಹಿಳೆ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ರೀತಿ ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸ ಬೇಕು. ಸುಜಾತ ಹಂಡೆ ಅವರು ಈ ಹಿಂದೆ ಕಾಂಗ್ರೇಸ್ ಪಕ್ಷದಲ್ಲಿದ್ದು ಅಕೆ ಇತ್ತೀಚೆಗೆ ಬಿಜೆಪಿ ಸೇರಿದ್ದಾರೆಂಬ ರಾಜಕೀಯ ದ್ವೇಷಕ್ಕಾಗಿ ಅಕೆಯ ಮೇಲೆ ಕಾಂಗೇಸ್ ಕಾಪೋರೇಟರ್ ಸುವರ್ಣ ಎಂಬುವು ನೀಡಿದ ಸುಳ್ಳು ಪ್ರಕರಣ ದಾಖಲಿಸಿ ಕಾಂಗ್ರೇಸ್ ಪಕ್ಷದವರು ದೌರ್ಜನ್ಯ ಎಸೆಗುವಂತೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಮಂತ್ರಿಗಳನ್ನು ಪ್ರಶ್ನಿಸಿದರೆ ತಮಗೆ ಗೊತ್ತಿಲ್ಲ. ತನಿಖೆ ಮಾಡಿಸುತ್ತೇನೆಂಬ ರೆಡಿ ಮೇಡ್ ಉತ್ತರ ನೀಡುತ್ತಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ನಂತರ ಮಹಿಳೆಯರು ಅಸುರಕ್ಷಿತವಾಗಿದ್ದಾರೆ. ಗೃಹ ಮಂತ್ರಿಗಳಿಗೆ ತಮ್ಮ ಇಲಾಖೆಯ ಮೇಲೆ ಹಿಡಿತ ಇಲ್ಲವಾಗಿರುವುದು ಅವರ ಬೇಜವಾಬ್ದಾರಿ ಹೇಳಿಕೆಗಳಿಂದ ಸ್ವಷ್ಟ ಪಡೆಸುತ್ತದೆ. ಜೀವಂತ ಪ್ರತಿಯೊರ್ವರಿಗೆ ಶ್ರದ್ದಾಂಜಲಿ ಪೋಸ್ಟ್ ಹಾಕಿರುವವರನ್ನು ಕೊಡಲೇ ಬಂಧಿಸಿ ಕ್ರಮ ಜರುಗಿಸ ಬೇಕು. ಈ ಪ್ರಕರಣ ದಲಿತ ಮಹಿಳೆಗೆ ಮಾಡಿದ ಅಪಮಾನವಾಗಿದೆ ಆರೋಪಿಯ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಿಸ ಬೇಕೆಂದು ಒತ್ತಾಯಿಸಿದರು.


ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಇರದೇ ಗುಂಡಾಗಿರಿಗೆ ಶ್ರೀರಕ್ಷೆಯಾಗಿದೆ. ಮಹಿಳೆಯ ಮೇಲೆ ದೌರ್ಜನ್ಯ ದರ್ಪ ತೋರಿದ ಪೊಲೀಸ್ ಅಧಿಕಾರಿಗಳನ್ನು ಕೊಡಲೇ ಅಮಾನತ್ತು ಪಡೆಸ ಬೇಕು. ಈ ಪ್ರಕರಣವನ್ನು ತನಿಖೆ ನಡೆಸಿ ಮುಂದೆ ಇಂಥಹ ಘಟನೆಗಳು ನಡೆಯದಂತೆ ಸರ್ಕಾರವು ಎಚ್ಚರಿಕೆ ವಹಿಸಲು ಕ್ರಮ ಜರುಗಿಸ ಬೇಕು. ಅನ್ಯಾಯಕ್ಕೆ ತುತ್ತಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಸಾಮಾಜಿಕ ನ್ಯಾಯ ದೊರಕಿಸ ಬೇಕೆಂದು ಆಗ್ರಹ ಪಡೆಸಿದರು.


ಮೆಡಿಕಲ್ ವಿದ್ಯಾರ್ಥಿನಿ ಪುಂಡರ ಕಿರುಕುಳದಿಂದ ಆತ್ಮಹತ್ಯೆ ಮಾಡಿ ಕೊಂಡಳು, ಓಂಶಕ್ತಿ ಮಾಲಾಧಾರಿಣಿಗಳ ಮೇಲೆ ಕಲ್ಲು ಎಸೆತ ಪ್ರಕರಣ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿದ್ದರೂ ಸಚಿವರ ಪೊಲೀಸರನ್ನು ಎಚ್ಚರಿಸುವ ಕೆಲಸ ಮಾಡುತ್ತಿಲ್ಲ. ರಾಜಕೀಯ ದ್ವೇಷ ತೀರಿಸಿ ಕೊಳ್ಳಲು ಪೊಲೀಸ್ ಇಲಾಖೆಯನ್ನು ಏಜೆಂಟ್ ಮಾದರಿಯಲ್ಲಿ ಶಾಮೀಲು ಮಾಡಿ ಕೊಂಡಿರ ಬೇಕು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾಂಗ್ರೇಸ್ ಪಕ್ಷಕ್ಕೆ ರಾಜ್ಯದಲ್ಲಿ ೨೦೨೮ಕ್ಕೆ ಕೊನೆಯ ಮೊಳೆ ಹೊಡೆದಿದ್ದಾರೆ ಎಂದು ಟೀಕಿಸಿದರು.


ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಮನವಿ ಪತ್ರ ಸ್ವೀಕರಿಸಿ ಸರ್ಕಾರಕ್ಕೆ ರವಾನಿಸುವುದಾಗಿ ತಿಳಿಸಿದರು.


ಪ್ರತಿಭಟನೆಯಲ್ಲಿ ಮುಖಂಡರಾದ ಸಾಮ ಅನಿಲ್ ಬಾಬು, ನಿವೃತ್ತ ಡಿ.ವೈ.ಎಸ್.ಪಿ. ಶಿವಕುಮಾರ್,ಪಿ. ಸುಗಟೂರು ಚಂದ್ರಶೇಖರ್, ರಾಜೇಶ್ ಸಿಂಗ್, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಶಿಳ್ಳೆಂಗೇರೆ ಮಹೇಶ್, ಓಹೀಲೇಶ್, ಅಂಬರೀಷ್,ಮಮತಮ್ಮ, ರಾಜೇಶ್ವರಿ, ಪದ್ಮ, ಸುಮ, ಸವಿತಾ, ಮುಂತಾದವರು ಭಾಗವಹಿಸಿದ್ದರು.