ಹುಮನಾಬಾದ್ ನಲ್ಲಿ ಬಿಜೆಪಿ ಸಂಭ್ರಮಾಚರಣೆ

ಹುಮನಾಬಾದ್:ಜ.21:ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್ ಅವರಿಗೆ ಭಾರತೀಯ ಜನತಾ ಪಕ್ಷ ಹುಮನಾಬಾದ ಮಂಡಲ ವತಿಯಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಡನೆ ಮಾನ್ಯ ಶಾಸಕರು ಡಾ.ಬಾಬಾ ಸಾಹೇಬ ಅಂಬೇಡ್ಕರ್ ವೃತ ಹತ್ತಿರ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಹೃತ್ಪೂರ್ವಕ ಅಭಿನಂದನೆಗಳು ಕೊರಿದರು.

ಯುವ, ಚುರುಕು ಹಾಗೂ ದೂರದೃಷ್ಟಿಯ ನಾಯಕತ್ವದೊಂದಿಗೆ ಅವರು ಪಕ್ಷವನ್ನು ಹೊಸ ಶಿಖರಗಳಿಗೆ ಕೊಂಡೊಯ್ಯಲಿ ಎಂದು ಹಾರೈಸುತ್ತೇನೆ.

ಭಾರತದ ಸಂಸ್ಕøತಿ, ಪರಂಪರೆ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಆಧಾರವಾಗಿಸಿಕೊಂಡು, ಅವರ ಸಮರ್ಥ ನಾಯಕತ್ವವು ಪ್ರತಿಯೊಬ್ಬ ಕಾರ್ಯಕರ್ತನಲ್ಲಿಯೂ ಹೊಸ ಶಕ್ತಿ ಮತ್ತು ಉತ್ಸಾಹ ತುಂಬಲಿ.

ನಮ್ಮ ಹೆಮ್ಮೆಯ ಕಮಲದ ಚಿಹ್ನೆಯು ದೇಶದಾದ್ಯಂತ ಅರಳಿ, ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಅಂತ್ಯೋದಯದ ಸಂದೇಶವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲಿ.

ಪ್ರತಿಯೊಬ್ಬ ಭಾರತೀಯನ ಪಕ್ಷವಾಗಿ, ಏಕ ಭಾರತ-ಶ್ರೇಷ್ಠ ಭಾರತ ಎಂಬ ಸಂಕಲ್ಪದೊಂದಿಗೆ ಬಿಜೆಪಿ ಇನ್ನಷ್ಟು ಬಲವಾಗಿ ಮುನ್ನಡೆಯಲಿ ಎಂದು ಹಾರೈಸಿದರು…

ಈ ಸಂದರ್ಭದಲ್ಲಿ ಅನಿಲ ಪಸರ್ಗಿ , ನಾಗಭೂಷಣ ಸಂಗ , ಅಶೋಕ ಹಣಕುಣಿ , ಕಿಶೋರ ಕೋಳಿವಾಡ , ರವಿ ಹೊಸಳ್ಳಿ , ಗಜೇಂದ್ರ ಕನಕಟಕರ , ಮಾಣಿಕ ರೆಡ್ಡಿ , ಅಂಜುರೆಡ್ಡಿ , ಸುನೀಲ ಪತ್ರಿ ಸೇರಿದಂತೆ ಅನೇಕ ಸಮಾಜ ಬಾಂದವರು , ಪಕ್ಷದ ಮುಖಂಡರು ಉಪಸ್ಥಿತರಿದ್ದರು.