ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿ ನಡೆಯುವುದೇ ಹುಟ್ಟು ಹಬ್ಬ:ಪಾಟೀಲ್

ಚಿತ್ತಾಪುರ:ಜ.3: ಹಿಂದಿನ ವರ್ಷ ನಮ್ಮ ಜೀವನದಲ್ಲಿ ನಾವು ಮಾಡಿದ ತಪ್ಪುಗಳನ್ನು ಅರಿತುಕೊಂಡು ಅದನ್ನು ತಿದ್ದಿ ನಡೆಯುವುದೇ ನಿಜವಾದ ಹುಟ್ಟು ಹಬ್ಬ ಎಂದು ರಾಯಚೂರ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಮಾಂತಗೌಡ ಪಾಟೀಲ್ ಹೇಳಿದರು.
ತಾಲೂಕಿನ ಭಾಗೋಡಿ ಗ್ರಾಮದ ಶ್ರೀಗಳಾದ ಪರಶುರಾಮ ಮುತ್ಯಾ ಅವರ 33ನೇ ಹುಟ್ಟು ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಹುಟ್ಟು ಹಬ್ಬ ಎನ್ನುವುದು ಕೇವಲ ಮೇಣದ ಬತ್ತಿ ಹಚ್ಚಿ ಸಿಹಿ ಕತ್ತರಿಸಿ ಆಚರಿಸಿಕೊಳ್ಳುವುದಲ್ಲ,ಅದನ್ನ ಹೊರತಾಗಿ ನಾವು ನಮ್ಮ ಜೀವನದಲ್ಲಿ ಹಿಂದಿನ ವರ್ಷ ನಾವು ಮಾಡಿದ ತಪ್ಪುಗಳನ್ನು ಅರಿತುಕೊಂಡು ಅದನ್ನು ಮುಂದು ವರಿಯದಂತೆ ತಪ್ಪುಗಳನ್ನು ತಿದ್ದಿಕೊಂಡು ನಡೆಯುವುದರ ಜೊತೆಗೆ ನಮ್ಮಲ್ಲಿರುವ ದುಷ್ಚಟಗಳನ್ನು ಬಿಟ್ಟು ಮುಂದಿನ ವರ್ಷಕ್ಕೆ ಹೆಜ್ಜೆ ಹಾಕುವುದೇ ಹುಟ್ಟು ಹಬ್ಬ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ದರ್ಗಾದ ಬಾಬಾ ಅವರು ಮಾತನಾಡಿ ಒಬ್ಬ ಸಾಮಾನ್ಯ ಮನುಷ್ಯ ಗುರುವಾಗಬೇಕಾದರೆ ಅದಕ್ಕೆ ಮುಖ್ಯ ಕಾರಣ ನಮ್ಮ ತಂದೆ ತಾಯಿಗಳು, ನಮ್ಮ ಜೀವನದ ಮೋದಲ ಗುರುಗಳಾದ ತಂದೆತಾಯಿಯರಿಗೆ ನಾವು ಗೌರವದಿಂದ ಕಾಣಬೇಕು,ಅವರು ಇರುವ ವರೆಗೆ ಅವರ ಸೇವೆ ಮಾಡಿದಾಗ ನಮ್ಮ ಜೀವನ ಸಾರ್ಥಕ ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಕೇಂದ್ರ ಬಿಂದು ಆಗಿರುವ ಪರಶುರಾಮ ಮುತ್ಯಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಸ್ಲಂ ಬಾಬಾ ಸಣ್ಣೂರ್,
ವಿಠಲ್ ಮುತ್ಯಾ ಭಾಗೋಡಿ,ಮಸ್ತಾನ ಮುತ್ಯಾ ಭಾಗೋಡಿ,ಮೋಗಲಾ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣ ಡಿಗ್ಗಿ, ಪುರಸಭೆ ಮಾಜಿ ಸದಸ್ಯ ದಶರಥ ದೊಡ್ಮನಿ,ಬಸವರಾಜ ಪಾಟೀಲ ದಳಪತಿ, ಮಲ್ಲಿಕಾರ್ಜುನ ಅಲ್ಲೂರಕರ್,ರಾಜೇಂದ್ರಪ್ಪ ಅರಣಕಲ್,ಮಲ್ಲಿಕಾರ್ಜುನ ಏರಿ,ದೇವಿಂದ್ರ ಹಾಸಬಾ,ದಶರಥ ಗುತ್ತೆದಾರ್,ಶಂಕರ್ ಸಾಯಬಾ,ಎಸ್ ಡಿ ಎಂ ಸಿ ಅಧ್ಯಕ್ಷ ದೇವಿಂದ್ರ ಡೋಣಗಾಂವ,ಶರಣು ಬೆಂಕಿ, ಸೇರಿದಂತೆ ಅನೇಕರು ಇದ್ದರು.