
ಚಿಕ್ಕಬಳ್ಳಾಪುರ : ಅ. ೬.ಜಿಲ್ಲೆಯ ಪ್ರತಿಷ್ಠಿತ ಶ ಕೆ. ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ. ನವೀನ ಕಿರಣ್ ರವರ ೪೭ನೇ ಹುಟ್ಟು ಹಬ್ಬವನ್ನು ವೈವಿಧ್ಯ ಹಾಗೂ ವೈಶಿಷ್ಟ್ಯ ಮಯ ರೀತಿಯಲ್ಲಿ ಅವರ ಅಭಿಮಾನಿಗಳು ಹುಟ್ಟು ಹಬ್ಬವನ್ನು ಆಚರಿಸಿದರು.
ತಾಲೂಕಿನ ಜನಪ್ರಿಯ ರಾಜಕಾರಣಿಗಳು ಸಮಾಜ ಸೇವಕರ್ತರು ಆದ ನವೀನ್ ಕಿರಣ್ ರವರ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನಲ್ಲಿ ಒಂದು ವಾರಗಳ ಕಾಲ ಸೇವಾ ಸಪ್ತಹ ಕಾರ್ಯಕ್ರಮಗಳನ್ನು ಆಚರಿಸಲಾಯಿತು ಇಂದು ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ಕಡೆ ಅನ್ನ ಸಂತರ್ಪಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲವೂ ಯಶಸ್ವಿಯಿಂದ ನಡೆಯುತ್ತಿದೆ.
ಬೆಳಗಿನಿಂದಲೇ ನಗರದ ಹೊರವಲಯದ ಕೆ ವಿ ನವೀನ ಕಿರಣ್ ರವರ ಮನೆಗೆ ಅವರ ಹಿತೈಷಿಗಳು ಹಾಗೂ ಕೆ ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಎಲ್ಲಾ ಸಿಬ್ಬಂದಿ ವರ್ಗ ಆಗಮಿಸಿ ಅವರನ್ನು ಅಭಿನಂದಿಸಿದರು.
ಪ್ರಮುಖವಾಗಿ ಇಂದು ಅವರ ಮನೆಗೆ ಆಗಮಿಸಿದ ಗಣ್ಯರುಗಳಾದ ಮಾಜಿ ಶಾಸಕ ಎಸ್‌ಎಂ ಮುನಿಯಪ್ಪ ನಗರದ ಕೈಗಾರಿಕೋದ್ಯಮಿ ಬಿ ಮಹೇಶ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಶ್ ನಗರಸಭೆ ೧೫ನೇ ವಾರ್ಡ್ ಸದಸ್ಯ ಟೀಚರ್ ಅಂಬರೀಶ್ ಶಿಕ್ಷಣ ಕ್ಷೇತ್ರದ ಹೆನ್ರಿ ಪ್ರಸನ್ನ ಕುಮಾರ್ ಒಳಗೊಂಡಂತೆ ಅನೇಕ ಮಂದಿ ಅವರ ಮನೆಗೆ ಆಗಮಿಸಿ ತುಂಬು ಹೃದಯದಿಂದ ನವೀನ್ ಕಿರಣ್ ರವರನ್ನು ಅಭಿನಂದಿಸಿದರು.
ಅಭಿಮಾನಿಗಳನ್ನು ಸಂಪಾದಿಸಿರುವುದು ನನ್ನ ಜನ್ಮದ ಸಾರ್ಥಕತೆ,: ನವೀನ್ ಕಿರಣ್
ನನ್ನ ಹುಟ್ಟು ಹಬ್ಬದ ಸಲುವಾಗಿ ಬೆಳಗಿನಿಂದಲೂ ಸಾಮಾಜಿಕ ಧಾರ್ಮಿಕ ರಾಜಕಾರಣ ಕ್ರೀಡೆ ಮುಂತಾದ ಕ್ಷೇತ್ರಗಳಿಂದ ನೂರಾರು ಹಿತೈಷಿಗಳು ನನ್ನ ಮನೆಗೆ ಆಗಮಿಸಿ ನನ್ನನ್ನು ಅಭಿನಂದಿಸಿರುವುದು ತುಂಬಾ ಸಂತೋಷದ ವಿಷಯ ಆಗಿದೆ. ಇಷ್ಟು ಮಂದಿ ಅಭಿಮಾನಿಗಳನ್ನು ಹೊಂದಿರುವ ನಾನು ತುಂಬಾ ಅದೃಷ್ಟವಂತ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
































