ಬಾಲತಪಸ್ವಿ ನಿರಗುಡಿ ಮುತ್ಯಾರ ಜನ್ಮದಿನೋತ್ಸವ:ರಾಜಶೇಖರ ರೆಡ್ಡಿ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ

ಸೇಡಂ,ಆ.28;ನಡೆದಾಡುವ ಅನ್ನದಾಸೋಹಿ, ಸಮಾನತೆಯ ರಾಷ್ಟ್ರಸಂತ, ಶೂನ್ಯ ಪೀಠಾಧಿಪತಿಗಳು ಹಾಗೂ ಶಿವಲಿಂಗಗಳ ಪ್ರತಿಷ್ಠಾಪಕರು ಜೊತೆಗೆ ಸಂವಿಧಾನದ ತತ್ವಗಳನ್ನು ಜನರಿಗೆ ತಲಿಪಿಸುವುದರ ಜೊತೆಗೆ ದೇಶಭಕ್ತಿಯನ್ನು ಪಸರಿಸುತ್ತಿರುವ ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರು ಸಿದ್ಧಿ ಪುಷರಾದ ಬಾಲತಪಸ್ವಿ ಶ್ರೀ ಹವಾಮಲ್ಲಿನಾಥ ಮಹಾರಾಜ ನಿರುಗುಡಿ ಮುತ್ಯಾರ 58ನೇ ಜನ್ಮದಿನೋತ್ಸವ ನಿಮಿತ್ಯವಾಗಿ ಜೈ ಭಾರತ ಮಾತಾ ಸೇವಾ ಸಮಿತಿಯ ಸೇಡಂ ತಾಲೂಕಾ ಘಟಕದ ಅಧ್ಯಕ್ಷರಾದ ರಾಜಶೇಖರ್ ರೆಡ್ಡಿ ನೇತೃತ್ವದಲ್ಲಿ ಬೃಹತ್ ಬೈಕ್ ಕಾರ ರ್ಯಾಲಿ ನಡೆಸಿದರು. ಇದಕ್ಕಿಂತ ಮುಂಚಿತವಾಗಿ ಕೈಲಾಸ ಪರ್ವತದಲ್ಲಿ ನಿರಗುಡಿ ಶ್ರೀಗಳ ಭಾವಚಿತ್ರ ಅಭಿಮಾನಿ ಭಕ್ತಾದಿಗಳು ಪ್ರದರ್ಶಿಸಿದರು. ಈ ವೇಳೆಯಲ್ಲಿ ಸಂತೋಷ ತಳವಾರ, ದೀಪಕ ಬಾಗೋಡಿ, ಭೀಮಾಶಂಕರ ಕೊಳ್ಳಿ, ಹನುಮಂತ ಮೆಕ್ಯಾನಿಕ್, ಅಕ್ಷಯ ಸಿಂಧೆ, ನಾಗರಾಜ ಹಾಬಳ, ಮಲ್ಲಿಕಾರ್ಜುನ ಊಡಗಿ, ನಾಗರಾಜ ಬೋಳದ, ಶರಣು ಊಡಗಿ ಇದ್ದರು.