
ಹುಬ್ಬಳ್ಳಿ,ಜ.೨೩: ದಿನಾಂಕ: ೨೧-೦೧-೨೦೨೬ ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಛೇರಿ, ಹುಬ್ಬಳ್ಳಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಅಂಗವಾಗಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ. ಭಾ.ಆ.ಸೇ ರವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪಿ.ಆರ್.ಕಿರಣಗಿ ರವರು ಮಾತನಾಡಿ, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರು ಅಂದಿನ ಸಮಾಜದಲ್ಲಿ ಪ್ರಚಲಿತವಿದ್ದ ಮೂಢನಂಬಿಕೆ ಕಂದಾಚಾರ, ಡಂಬಾಚಾರ ಮತ್ತು ಶೋಷಣೆಯನ್ನು ತಮ್ಮ ವಚನಗಳ ಮೂಲಕ ನೇರ ನಿಷ್ಠುರವಾಗಿ ಅತ್ಯಂತ ಕಟು ಶಬ್ದಗಳಲ್ಲಿ ವಿರೋಧಿಸುವುದರ ಜೊತೆಗೆ ಎಲ್ಲರಿಗೂ ಸಮಾನತೆಯ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿಯ ಇಲಾಖಾ ಮುಖ್ಯಸ್ಥರಾದ ಗಣೇಶ ರಾಠೋಡ, ಶ್ರೀನಿವಾಸಮೂರ್ತಿ.ಸಿ.ಈ, ಶಶಿಧರ ಕುಂಬಾರ, ಶಶಿಧರ ಮರಿದೇವರಮಠ, ಜಗದಂಬಾ ಕೋಪರ್ಡೆ ಹಾಗೂ ಅಧಿಕಾರಿಗಳಾದ ಎಂ.ಬಿ.ಕಪಲಿ, ನವೀನಕುಮಾರ ತಿಪ್ಪಾ, ಪಿ.ಆರ್.ಕಿರಣಗಿ, ಕೇಂದ್ರ ಕಛೇರಿಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಹಾಗೂ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ವಿರುಪಾಕ್ಷ ಕಟ್ಟಿಮನಿ ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

























