ಅಪಘಾತ ಬೈಕ್ ಸವಾರರಿಗೆ ಗಾಯ

ಸಂಜೆ ವಾಣಿ ವಾರ್ತೆ
ಜಮಖಂಡಿ :ಅ.೨೮: ತಾಲೂಕಿನ ಜಕನೂರ ಗ್ರಾಮದಲ್ಲಿ ಟ್ರ‍್ಯಾಕ್ಟರನಟ್ಯಾಂಕರ ಮತ್ತು ಬೈಕ್ ಮದ್ಯ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರರಿಗೆ ಗಂಭೀರ ಗಾಯ ವಾಗಿರುವ ಘಟನೆ ಜರುಗಿದೆ.
ಜಕನೂರು ಮಾರ್ಗವಾಗಿ ಲಿಂಗನೂರ ಗ್ರಾಮಕ್ಕೆ ತೆರಳುತಿದ ಬೈಕ್ ಸವಾರರು ಮುಂಭಾಗದಿAದ ಬರುತಿದ್ದ ಟ್ರ‍್ಯಾಕ್ಟರ ಟ್ಯಾಂಕರ ಗುದ್ದಿದ ಪರಿಣಾಮ ಬೈಕ್ ಸವಾರರ ಮೇಲೆ ಏರಿದೆ ಬೈಕ್ ಸವಾರರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಮಖಂಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಗಂಭಿರವಾದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ
ಗಾಯಾಳುಗಳನ್ನು ಲಿಂಗನೂರ ಗ್ರಾಮದ ೪೨ ವಯಸ್ಸಿನ ಪುಂಡಲಿಕ. ಯಂಕಪ್ಪ. ಮಾದರ,೨೮ ವಯಸ್ಸಿನ ಬಾಳಪ್ಪ ಪಾಂಡಪ್ಪ ಮಾದರ,೨೨ ವಯಸ್ಸಿನ ಸಚಿನ ಸಿರೇಶ ಮಾದರ ಎಂದು ಗುರುತಿಸಲಾಗಿದೆ
ಮೂವರು ಎಂದಿನAತೆ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುವ ಸಂಧರ್ಭದಲ್ಲಿ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ