ಬಸವ ಸಂಸ್ಕೃತಿ ಅಭಿಯಾನ ಯಾತ್ರೆಯ ನಿಮಿತ್ಯ ಬೈಕ್ ರ‍್ಯಾಲಿ

ಬಸವನಬಾಗೇವಾಡಿ :ಸೆ.೧:ಪಟ್ಟಣದ ವಿವೇಕ್ ಬ್ರಿಗೇಡಿಯರ್ ಯುವಕ ಸಂಘಗಳ ಆಶ್ರಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ಪ್ರಚಾರಕ್ಕೋಸ್ಕರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು ಬಸವ ಸ್ಮಾರಕ ಮುಂಭಾಗ ಬೈಕ್ ರ್ಯಾಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಬೈಕ್ ರ್ಯಾಲಿ ಉದ್ಘಾಟನೆಯನ್ನು ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಈರಣ್ಣ ಪಟ್ಟಣಶೆಟ್ಟಿ ಉದ್ಘಾಟಿಸಿದರು ಅವರು ಮಾತನಾಡಿ ಎಲ್ಲಾ ಬೈಕುಗಳು ಸಾಲಾಗಿ ಮತ್ತು ನಿಧಾನವಾಗಿ ಹಾಗೂ ಯಾವುದೇ ಅಪಘಾತ ಆಗದಂತೆ ಎಲ್ಲಾ ಬೈಕ್ ಸವಾರರು ನೋಡಿಕೊಂಡು ಬೈಕ್ ಸವಾರಿ ಮಾಡಬೇಕು ಈ ಕಾರ್ಯಕ್ರಮ ಸಾನಿಧ್ಯವನ್ನು ಸ್ಥಳೀಯ ವಿರಕ್ತಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಹಿಸಿಕೊಂಡು ಆಶೀರ್ವಚನ ನೀಡಿದರು ಬೈಕ್ ರ್ಯಾಲಿ ಎಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಠಾಣೆಯ ಸಿಪಿಐ ಗುರುಶಾಂತ್ ದಾಶಾಳ ಅವರು ಸಹ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು ಊರಿನ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮಾಡಿಕೊಂಡು ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು ಬೈಕ್ ರ್ಯಾಲಿಯಲ್ಲಿ ನೂರಾರು ಯುವಕರು ಬೈಕ್ ಸವಾರಿ ಮಾಡಿದರು