ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೩:ದಿ. ಬಿಜಾಪುರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ., ಸಂಘದ ೩೨ನೇ ವಾರ್ಷಿಕ ಸರ್ವ ಸದಸ್ಯರ ಸಭೆ ನಗರದ ಮರ್ಚಂಟ್ ಅಸೋಶಿಯೇಶನ ಮಂಗಲ ಕಾರ್ಯಾಲಯದಲ್ಲಿ ಜರುಗಿತು.
ಸಭೆಯಲ್ಲಿ ೨೦೨೪-೨೫ ರಲ್ಲಿ ಅಗಲಿದ ಸಂಘದ ಸದಸ್ಯರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು. ಸಂಘದ ಅಧ್ಯಕ್ಷÀ ಗುರುಶಾಂತ ನಿಡೋಣಿ ಅವರು ಮಾತನಾಡಿ, ಸಂಘವು ೨೦೨೪-೨೫ನೇ ಸಾಲಿನಲ್ಲಿ ರೂ. ೨೪.೪೯ ಕೋಟಿಗಳಷ್ಟು ಠೇವು ಸಂಗ್ರಹಿಸಿದೆ. ರೂ. ೧೮.೩೪ ಕೋಟಿಗಳಷ್ಟು ಸಾಲವನ್ನು ವಿತರಿಸಿ ವರ್ಷಾಂತ್ಯಕ್ಕೆ ರೂ. ೭೫.೧೦ ಲಕ್ಷ ಲಾಭ ಗಳಿಸಿದೆ. ೨೦೨೪-೨೫ನೇ ಸಾಲಿನ ಲಾಭಾಂಶ ಶೇ. ೧೨ರಷ್ಟು ಆಗಿದೆ ಎಂದು ಘೋಷಣೆ ಮಾಡಿದರು.
ಸಂಘದ ಎಲ್ಲ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭೆಯ ದಿವ್ಯ ಸಾನ್ನಿಧ್ಯವನ್ನು ಪೂಜ್ಯ ಮಾತೋಶ್ರೀ ಯೋಗೇಶ್ವರಿ ಅಮ್ಮನವರು ವಹಿಸಿದ್ದರು. ವಿಜಯಪುರ ಮಹಾನಗರ ಪಾಲಿಕೆ ಮಹಾಪೌರರಾದ ಮಡಿವಾಳಪ್ಪ ಕರಡಿ ಹಾÀಗೂ À ಡಿವಾಯ್‌ಎಸ್‌ಪಿ ಬಸವರಾಜ ಯಲಿಗಾರ, ಟ್ಯಾಕ್ಸ ಪ್ರಾö್ಯಕ್ಟಿಶನರ್ ರೇವಪ್ಪ ಮುರುಗಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ರೇಣುಕಾ ಗಂಜ್ಯಾಳ, ನಿರ್ದೇಶಕರಾದ ಸಿ.ಜಿ. ಪಾರಗೊಂಡ, ಪಿ.ಪಿ. ನ್ಯಾಮಗೌಡ, ಎಂ.ಸಿ. ಶಿರಕನಹಳ್ಳಿ, ಸಿ.ಕೆ. ಜಂಗಮಶೆಟ್ಟಿ, ಎನ್.ಎಸ್. ಚೌಧರಿ, ವಿ.ಆರ್. ಕಪ್ಪರದ ಪಿ.ಆರ್. ಸಾವಳಗಿ, ಆರ್.ಬಿ. ಪಾಟೀಲ ಹಾಗೂ ಕೆ.ಎಲ್. ರಾಠೋಡ, ಬಿ.ಡಿ. ವಾಲಿಕಾರ ಉಪಸ್ಥಿತರಿದ್ದರು.
ಎಂ.ಬಿ. ಉಮ್ಮಣ್ಣವರ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಕರು ೨೦೨೫-೨೬ ಅಂದಾಜು ಪತ್ರಿಕೆ ಸಭೆಗೆ ಸಾದರ ಪಡಿಸಿದರು. ಸಂಗಮೇಶ ಬದಾಮಿ ಹಾಗೂ ಬಸವರಾಜ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ನಿರ್ದೇಶಕÀ ವಿಜಯಕುಮಾರ ಕೃಷ್ಣಾಪೂರ ವಂದಿಸಿದರು.


























