ಬೆಂಗಳೂರು, ಅ. ೯- ಬಿಗ್‌ಬಾಸ್ ಮನೆಯ ಬೀಗ ತೆಗೆದ ಬೆನ್ನಲ್ಲೇ ಇಂದು ಮುಂಜಾನೆ ಬಿಡದಿಯ ಈಗಲ್ಟನ್ ರೆಸಾರ್ಟ್‌ನಿಂದ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಆಯೋಜಕರು ಕಾರಿನಲ್ಲಿ ಸ್ಪರ್ಧಿಗಳನ್ನು ಕರೆತಂದಿದ್ದಾರೆ. ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ ಬೆನ್ನಲ್ಲೇ ವಾಹಿನಿ ಎಂದಿನಂತೆ ಅದೇ ಸಮಯಕ್ಕೆ ಶೋ ಪ್ರಸಾರವಾಗಲಿದೆ ಎಂದು ಪ್ರೋಮೋ ಬಿಡುಗಡೆ ಮಾಡಿದೆ.
ಬಿಗ್‌ಬಾಸ್ ಮನೆಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬೀಗ ಜಡಿದ ನಂತರ ಸ್ಪರ್ಧಿಗಳನ್ನು ೬ ಕಿ.ಮೀ ದೂರದಲ್ಲಿರುವ ಈಗಲ್ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿತ್ತು. ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಮ ಪಾಲನೆ ಮಾಡದ್ದಕ್ಕೆ ಈ ರೆಸಾರ್ಟ್‌ಗೆ ನಿಮ್ಮನ್ನು ಕರೆತರಲಾಗಿದೆ ಎಂಬ ವಿಚಾರವನ್ನು ಆಯೋಜಕರು ಸ್ಪರ್ಧಿಗಳಿಗೆ ತಿಳಿಸಿದ್ದರು.
ರೆಸಾರ್ಟ್‌ನಲ್ಲೂ ಬಿಗ್ ಬಾಸ್ ನಿಯಮ ಅನ್ವಯವಾಗುತ್ತಿತ್ತು. ಯಾರ ಜೊತೆಯೂ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ರೆಸಾರ್ಟ್ ಸಿಬ್ಬಂದಿಯ ಜೊತೆಯೂ ಮಾತುಕತೆ ಆಡುವಂತಿಲ್ಲ, ಊಟ, ತಿಂಡಿ ಇತ್ಯಾದಿಗಳನ್ನು ಕೋಣೆಗೆ ಕಳುಹಿಸಲಾಗುತ್ತಿದೆ ಎಂದು ಆಯೋಜಕರು ಸ್ಪರ್ಧಿಗಳಿಗೆ ಸೂಚಿಸಿದ್ದರು. ಅಷ್ಟೇ ಅಲ್ಲದೇ ಮೊಬೈಲ್, ಇಂಟರ್ನೆಟ್, ಟಿವಿ ಯಾವ ಸೌಲಭ್ಯಗಳನ್ನು ಸಹ ನೀಡಿರಲಿಲ್ಲ.
ಬಿಗ್ ಬಾಸ್ ಬಿಗ್ ಕಂಟಕ ಎದುರಿಸಿದ್ದು ಏನೇನು?
ಪರಿಸರ ನಿಯಮ ಉಲ್ಲಂಘನೆ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೆ ಕನ್ನಡ ಬಿಗ್ ಬಾಸ್ ಆರಂಭಿಸಿದ ಹಿನ್ನೆಲೆಯಲ್ಲಿ ನಿನ್ನೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಬೆಂಗಳೂರು ದಕ್ಷಿಣ ತಹಶೀಲ್ದಾರ್ ತೇಜಸ್ವಿನಿ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದ್ದರು.
ಬಿಗ್ ಬಾಸ್ ಗೆ ಬೆಸ್ಕಾಂನಿದಲೂ ಸಂಕಷ್ಟ..!?
ಬಿಗ್ ಬಾಸ್ ಮನೆಗೆ ಬೀಗ ಜಡಿದಿರುವ ಬೆನ್ನಲ್ಲೆ ಇದೀಗ ಬಿಗ್ ಬಾಸ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿದ್ಯುತ್ ಕಡಿತ ಮಾಡುವ ಕುರಿತು ಬೆಸ್ಕಾಂ ಬಿಗ್ ಬಾಸ್ ಆಯೋಜಕರಾದ ವೆಲ್ ಸ್ಟುಡಿಯೋಗೆ ನೋಟಿಸ್ ನೀಡಿ. ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಂಬಂಧ ನೀಡಲು ಮುಂದಾಗಿತ್ತು . ಜಾಲಿವುಡ್ ಸ್ಟುಡಿಯೋ ಬಳಿ ಬಂದ ಬಿಡದಿ ಎಇಇ ಮೋಹಿತಾ ಆಗಮಿಸಿ ನೋಟಿಸ್ ನೀಡಲು ಸಹ ಮುಂದಾಗಿದ್ದರು.
ಇದೀಗ ವೆಲ್ಸ್ ಸ್ಟುಡಿಯೋಸ್ ರವರು ೧೫ ದಿನಗಳ ಕಾಲ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಬಿಗ್ ಬಾಸ್ ಶೋಗೆ ೧೦ ದಿನಗಳ ಕಾಲ ರಿಲೀಫ್ ಸಿಕ್ಕಿದ್ದು, ಜಿಲ್ಲಾಡಳಿತ ೧೦ ದಿನಗಳ ಕಾಲಾವಕಾಶ ನೀಡಿದೆ. ಯಾವ ನಿಮ್ಮ ಪಾಲನೆ ಆಗಿಲ್ಲ ಅದೆಲ್ಲವನ್ನು ಸರಿಪಡಿಸುತ್ತೇವೆ ಎಂದು ವೆಲ್ಸ್ ಸ್ಟುಡಿಯೋಸ್ ಡಿಸಿಗೆ ಪತ್ರ ಬರೆದು ಮನವಿ ಮಾಡಿದ್ದು ಹಾಗಾಗಿ ಜಿಲ್ಲಾಡಳಿತ ೧೦ ದಿನಗಳ ಕಾಲ ಅವಕಾಶ ನೀಡಿದೆ ಎನ್ನಲಾಗಿದ್ದು, ಈಗಾಗಲೇ ಬಿಡದಿ ಬೆಳೆಯುವ ಈಗಲ್ಟನ್ ರೆಸಾರ್ಟ್ ನಲ್ಲಿ ಇರುವ ಬಿಗ್ ಬಾಸ್ ಸ್ಪರ್ಧಿಗಳು ತಂಗಿದ್ದರು. ಇಂದು ಬೆಳಂಬೆಳಗ್ಗೆ ದೊಡ್ಮನೆಗೆ ಆಯೋಜಕರು ಕರೆತಂದಿದ್ದಾರೆ.
ಆರು ತಿಂಗಳ ಕಾಲ ಮೂರು ಶಿಫ್ಟ್‌ನಲ್ಲಿ ತಂತ್ರಜ್ಞರು ಕೆಲಸ ಮಾಡುತ್ತಿದ್ದರು. ಐದು ಕೋಟಿಗೂ ಅಧಿಕ ವೆಚ್ಚದಲ್ಲಿ ಬಿಗ್ ಬಾಸ್ ಮನೆ ನಿರ್ಮಾಣವಾಗಿತ್ತು. ಅರಮನೆ ವಿನ್ಯಾಸದಲ್ಲಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗಿತ್ತು. ಕಿಚ್ಚ ಸುದೀಪ್ ಆಶಯದಂತೆ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಮನೆ ನಿರ್ಮಾಣಗೊಂಡಿದೆ.
ಪ್ರಕರಣ ಇದೀಗ ಸುಖಾಂತ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕಲರವ ಶುರುವಾಗಲಿದೆ.




























