Home ಜಿಲ್ಲೆ ಟಿಸಿಟಿಸಿ ರಾಷ್ಟ್ರಮಟ್ಟದ ಫೈನಲ್‌ಗೆ ಬೀದರ್‌ನ ಶ್ರೇಯಸ್, ಸುಕೃತಿ

ಟಿಸಿಟಿಸಿ ರಾಷ್ಟ್ರಮಟ್ಟದ ಫೈನಲ್‌ಗೆ ಬೀದರ್‌ನ ಶ್ರೇಯಸ್, ಸುಕೃತಿ

ಬೀದರ್, ಸೆ.೨೨: ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಶನ್‌ನ ಕೋರ್ ಸೈನ್ಸ್ ಆಕ್ಟಿವಿಟಿ ಸೆಂಟರ್, ಬೀದರ್‌ನ ಮಾರ್ಗದರ್ಶನ ಮತ್ತು ಬೆಂಬಲದೊAದಿಗೆ ಸರ್ಕಾರಿ ಆದರ್ಶ ವಿದ್ಯಾಲಯದ ಙIಐs ವಿದ್ಯಾರ್ಥಿಗಳಾದ ಶ್ರೇಯಸ್ ಹಾಗೂ ಸುಕೃತಿ ಅವರು ಖಿimes ಅಡಿiಣiಛಿಚಿಟ ಖಿhiಟಿಞiಟಿg ಅhಚಿmಠಿioಟಿshiಠಿ (ಖಿಅಖಿಅ) ಕ್ವಿಜ್ ಸ್ಪರ್ಧೆಯ ರಾಷ್ಟ್ರಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾಗುವ ಮೂಲಕ ಬೀದರ್ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ನವದೆಹಲಿಯಲ್ಲಿ ಸೆ.೧೮ರಂದು ನಡೆದ ರಾಷ್ಟ್ರಮಟ್ಟದ ಅಂತಿಮ ಸುತ್ತಿನಲ್ಲಿ ಇಬ್ಬರೂ ವಿದ್ಯಾರ್ಥಿಗಳು ಭಾಗವಹಿಸಿದರು. ದೇಶದಾದ್ಯಂತ ೧೦,೦೬,೯೨೨ ವಿದ್ಯಾರ್ಥಿಗಳು ಮತ್ತು ೨೪,೭೦೬ ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇಂತಹ ಬೃಹತ್ ಮಟ್ಟದ ಸ್ಪರ್ಧೆಯಲ್ಲಿ ಬೀದರ್‌ನ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಫೈನಲ್‌ಗೆ ಆಯ್ಕೆಯಾಗಿರುವುದು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಗಮನಾರ್ಹ ಸಾಧನೆಯಾಗಿದೆ.

ನವದೆಹಲಿಯ ಆPS ಖಏ Puಡಿಚಿmನಲ್ಲಿ ನಡೆದ ಈiಟಿಚಿಟ ಂssessmeಟಿಣ ಖouಟಿಜಗೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಕುಮಾರ್ (IಂS) ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಖಿಅಖಿಅ ಂಜvisoಡಿಥಿ ಃoಚಿಡಿಜನ Pಚಿಣಡಿoಟಿ-iಟಿ-ಅhieಜಿ ಹಾಗೂ ಪ್ರಧಾನಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಉಪಸ್ಥಿತರಿದ್ದರು.

ಶ್ರೇಯಸ್ ಮತ್ತು ಸುಕೃತಿ ಅವರು ಕುತೂಹಲ, ಪರಿಶ್ರಮ, ಆತ್ಮವಿಶ್ವಾಸ, ಜ್ಞಾನ ಹಾಗೂ ವಿಮರ್ಶಾತ್ಮಕ ಚಿಂತನಾ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದರು. ಅಗಸ್ತ್ಯ ಫೌಂಡೇಶನ್‌ನ ಕೋರ್ ಸೈನ್ಸ್ ಆಕ್ಟಿವಿಟಿ ಸೆಂಟರ್‌ನ ತರಬೇತಿ ಹಾಗೂ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಬೆಳೆದಿದೆ.

ಕೇಂದ್ರದ ಮುಖ್ಯಸ್ಥ ಬಾಬುರಾವ್ ಸಳಸಾರೆ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಶ್ರೇಯಸ್ ಹಾಗೂ ಸುಕೃತಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರಮಟ್ಟದ ವೇದಿಕೆಯಲ್ಲಿ ಬೀದರ್‌ನ ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಿರುವುದು ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಮಾರ್ಗದರ್ಶಕ ಆಕಾಶ್ ಪಾಟೀಲ್ ಅವರ ಮಾರ್ಗದರ್ಶನವೂ ಸಾಧನೆಗೆ ನೆರವಾಗಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿದ ಅಗಸ್ತ್ಯ ಫೌಂಡೇಶನ್‌ನ ಶೈಕ್ಷಣಿಕ ಚಟುವಟಿಕೆಗಳನ್ನು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶ್ಲಾಘಿಸಿ, ಶ್ರೇಯಸ್ ಮತ್ತು ಸುಕೃತಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.