ಭಾನುಪ್ರಿಯ ಅರಳಿ ನೇತೃತ್ವದ ಬೀದರ್ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಬೀದರ್:ಮೇ.22: ಇತ್ತೀಚೆಗೆ ಶಿವಮೊಗ್ಗದಲ್ಲಿ ಜರುಗಿದ ರಾಜ್ಯಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಬೀದರ್ ಜಿಲ್ಲೆಯ ಭಾನುಪ್ರಿಯ ಅರಳಿ ನೇತೃತ್ವದ ಜಾನಪದ ಸಮೂಹ ಗಾಯನ ತಂಡ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸತತ ಎರಡನೇ ಬಾರಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಬೀದರ್ ಜಿಲ್ಲೆಯ ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನೊಳಗೊಂಡ ಈ ತಂಡ ಕಳೆದ ವರ್ಷವೂ ಕೂಡ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿತ್ತು ಪ್ರಸಕ್ತ ವರ್ಷದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಕೂಟದಲ್ಲಿಯೂ ಪ್ರಥಮ ಸ್ಥಾನ ಪಡೆದು ಸತತ ಎರಡನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಬೀದರ್ ಜಿಲ್ಲೆಗೆ ದೊರಕಿರುವ ಹೆಮ್ಮೆಯ ಸಂಗತಿ ಆಗಿರುತ್ತದೆ.
ಬೀದರ್ ಜಿಲ್ಲೆಯ ಈ ತಂಡದಲ್ಲಿ ಭಾನುಪ್ರಿಯ ಅರಳಿ ಅವರೊಂದಿಗೆ ತಂಡದಲ್ಲಿ ಮನೋಹರ್ ಎಂ ಎಸ್, ದೀಪಾ ಕಿರಣ್, ರೇಣುಕಾ ಕೋಟೆ, ಮಲ್ಲಮ್ಮ, ರಾಜಕುಮಾರ್ ಕರುಣಾಸಾಗರ್, ಪ್ರಣಿತಾ ಕೋರೆ ಹಾಗೂ ಶಿವಕುಮಾರ್ ಹಾಜರಿದ್ದರು.
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಈ ತಂಡಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ ಎಸ್ ಷಡಕ್ಷರಿ ರವರು ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ನೀಡಿ ಶುಭ ಹಾರೈಸಿದರು.
ಬೀದರ್ ಜಿಲ್ಲೆಯ ಇತಿಹಾಸದಲ್ಲಿಯೇ ಕಳೆದ ವರ್ಷ ರಾಷ್ಟ್ರ ಮಟ್ಟಕ್ಕೆ ಪ್ರಥಮ ಬಾರಿಗೆ ಆಯ್ಕೆಯಾದ ಈ ತಂಡ ಈ ಸಾಲಿನಲ್ಲಿ ಕೂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಬೀದರ್ ಜಿಲ್ಲೆಗೆ ಹೆಮ್ಮೆ ತರುವಂತ ವಿಷಯವಾಗಿದೆ ಸದರಿ ತಂಡವು ಉತ್ತಮ ಪ್ರದರ್ಶನ ನೀಡಿದ್ದು ಅವರು ರಾಷ್ಟ್ರಮಟ್ಟದಲ್ಲಿ ಕೂಡ ಪ್ರಶಸ್ತಿ ಪಡೆದು ಬೀದರ್ ಜಿಲ್ಲೆಗೆ ಹೆಸರು ತರುವಂತೆ ಆಗಲಿ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಚಿದ್ರಿ ಅವರು ಶುಭ ಹಾರೈಸಿದರು.