
ಬೀದರ: ಜ.24:ಬೀದರ ಜಿಲ್ಲೆ ಕನ್ನಡ ನಾಗರಿಕತೆಯ ತೊಟ್ಟಿಲಾಗಿದೆ. ಶರಣರು, ಸೂಫಿ ಸಂತರು ಹಾಗೂ ಮಹಾತ್ಮ ಮಹಾನುಭಾವರು ನಡೆದಾಡಿದ ಪುಣ್ಯ ಭೂಮಿ ಇದಾಗಿದೆ ಎಂದು ಆಂಧ್ರಪ್ರದೇಶದ ವಿಜಯವಾಡದ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಜಯರಾಮ ರಾಯಪುರ ತಿಳಿಸಿದರು.
ಕರ್ನಾಟಕ ಸಾಹಿತ್ಯ ಸಂಘ ಮತ್ತು ಸಮಾಜಮುಖಿ ಪತ್ರಿಕೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಜರುಗಿದ ನಡೆದು ನೋಡು ಕರ್ನಾಟಕ, ಬೀದರ ನಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ದೇಶದ ಯುವಕರು ಅನ್ಯ ದೇಶಗಳಿಗೆ ಹೋಗಿ ಅಲ್ಲಿಯ ಶಿಸ್ತು ಸ್ವಚ್ಛತೆ, ಬಹುಮಹಡಿ ಕಟ್ಟಡ ನೋಡಿ ಹೊಗಳುತ್ತಾರೆ. ನಮ್ಮ ದೇಶದ ಸರಿಯಾಗಿಲ್ಲ ಎನ್ನುವ ಕೀಳರಿಮೆ ಹೋಗಲಾಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳ ಐತಿಹಾಸಿಕ ಮತ್ತು ಪ್ರೇಕ್ಷಣಿಯ ಸ್ಥಳಗಳ ವೀಕ್ಷಿಸಿ ಈ ಕುರಿತು ಯುವ ಪೀಳಿಗೆಗೆ ನಮ್ಮ ನಾಡು, ಸಂಸ್ಕøತಿ, ಆಚಾರ-ವಿಚಾರ, ಊಟ ಉಪಚಾರಗಳ ಮತ್ತು ಶ್ರೀಮಂತ ಜನಪದ ಸಂಸ್ಕೃತಿ ಕುರಿತು ತಿಳಿಸಿಕೊಡುವುದೇ ನಡೆದು ನೋಡು ಕರ್ನಾಟಕ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು. ಇದೊಂದು ವಿನೂತನ ಕಾರ್ಯಕ್ರಮ. ಅನ್ಯ ದೇಶಗಳಿಗೆ ಹೊಗಳದೆ ನಮ್ಮ ದೇಶ ಮತ್ತು ರಾಜ್ಯದ ಸೌಂದರ್ಯ ಅನುಭವಿಸಬೇಕು. ನಮ್ಮ ದೇಶ ರಾಜ್ಯದ ಕುರಿತು ಅಭಿಮಾನ ಹುಟ್ಟಿಸಬೇಕು ಎನ್ನುವ ಕಾರಣಕ್ಕೆ ಇದು 25ನೇ ನಡಿಗೆ ಕಾರ್ಯಕ್ರಮ ಬೀದರನಲ್ಲಿ ಹಮ್ಮಿಕೊಂಡಿದ್ದೇವೆ. ಸಂಡೂರಿನಲ್ಲಿ ಪ್ರಥಮ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಂಚರಿಸಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪೆÇ್ರ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಬೀದರ ಜಿಲ್ಲೆಯ ಶರಣರ, ಸಂತರ, ಸೂಫಿಗಳ ನಾಡು. ಇಲ್ಲಿ ಗುರುನಾನಕ ಮತ್ತು ನರಸಿಂಹ ಝರಣಿ ಝರಿಗಳಿವೆ. ಐತಿಹಾಸಿಕ ಕರೇಜ್‍ಗಳಿವೆ. ಕೋಟೆ, ಮದರಸಾ, ಪಾಪನಾಶ ಮತ್ತು ಗುಂಬಜ್‍ಗಳಿವೆ. ಕಾಕತೀಯ, ಕಲಚೂರಿ, ಚಾಲುಕ್ಯರು ಮತ್ತು ಬಹಮನಿ ಸುಲ್ತಾನರು ಆಳಿದ ನಾಡಿನಲ್ಲಿ, ಅತ್ತ ತೆಲುಗು, ಇತ್ತ ಮರಾಠಿ ಭಾಷೆಯ ಪ್ರಭಾವದ ಮಧ್ಯೆಯೂ ಕನ್ನಡ ಉಳಿಸಿ ಬೆಳೆಸಿದ ಹಲವು ಮಹಾತ್ಮರು ನಮ್ಮಲ್ಲಿದ್ದಾರೆ. ವಚನ ಮತ್ತು ದಾಸ ಸಾಹಿತ್ಯವಿಲ್ಲದ ಕನ್ನಡ ಸಾಹಿತ್ಯ ಅಪೂರ್ಣ. ಇಂತಹ ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಗಂಡು ಮೆಟ್ಟಿದ ನಾಡು ಬೀದರ ಜಿಲ್ಲೆಗೆ ಆಗಮಿಸಿದ ಸಮಾಜಮುಖಿ ಪತ್ರಿಕೆ ತಂಡದವರಿಗೆ ಧನ್ಯವಾದಗಳು ಎಂದರು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ ಸಮಾಜಮುಖಿ ಪತ್ರಿಕೆಯ ವತಿಯಿಂದ ರಾಜ್ಯದಾದ್ಯಂತ ಆಯೋಜಿಸಿದ ನಡೆದು ನೋಡು ಕರ್ನಾಟಕ ಕಾರ್ಯಕ್ರಮ ವಿನೂತನ ಮತ್ತು ಅರ್ಥಪೂರ್ಣವಾಗಿದೆ. ಇಂದಿನ ಯುವ ಪೀಳಿಗೆಗೆ ನಮ್ಮ ರಾಜ್ಯ, ನಮ್ಮ ದೇಶದ ಕುರಿತು ಇರುವ ಕೀಳರಿಮೆ ಹೋಗಲಾಡಿಸಿ, ಹೆಮ್ಮೆಯನ್ನು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಸಮಾಜಮುಖಿ ತಂಡಕ್ಕೆ ಕೃತಜ್ಞತೆಗಳು. ಅವರ ಕಾರ್ಯ ಯಶಸ್ವಿಯಾಗಿ ಸಾಗಲಿ ಎಂದರು.
ಗದಗನ ಖಜಾನೆ ಇಲಾಖೆಯ ಉಪನಿರ್ದೇಶಕ ಹರಿನಾಥ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಮೈಸೂರಿನ ಪ್ರಾಧ್ಯಾಪಕಿ ಡಾ. ವಿಜಯಲಕ್ಷಿ??ೀ, ಗಂಗಾವತಿ ಸ.ಪ್ರ.ದ.ಕಾಲೇಜಿನ ಪ್ರಾಧ್ಯಾಪಕ ಜಾಜಿ ದೇವೇಂದ್ರಪ್ಪ, ಔರಾದನ ಸ.ಪ್ರ.ದ.ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸಂಜೀವಕುಮಾರ ತಾಂದಳೆ ಉಪಸ್ಥಿತರಿದ್ದರು.
ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಡಾ. ಅಶೋಕ ಕೋರೆ ನಿರೂಪಿಸಿದರು. ವೈಜಿನಾಥ ಪಾಟೀಲ ವಂದಿಸಿದರು. ಕಾರ್ಯಕ್ರಮದ ನಂತರ ಬೀದರನ ಐತಿಹಾಸಿಕ ಸ್ಥಳಗಳು, ಬಸವಕಲ್ಯಾಣ ಸೇರಿದಂತೆ ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ಸಮಾಜಮುಖಿ ಪತ್ರಿಕೆಯ ತಂಡ ಸಾಗಿತು. ಈ ತಂಡದಲ್ಲಿ ಹಿರಿಯ ಸಾಹಿತಿಗಳು, ಐಎಎಸ್, ಕೆ.ಎ.ಎಸ್ ಅಧಿಕಾರಿಗಳು, ಪ್ರಜ್ಞಾವಂತ ವಿಚಾರವಾದಿ ಚಿಂತಕರು, ಮಹಿಳಾ ಸಾಹಿತಿಗಳು ಉಪಸ್ಥಿತರಿದ್ದರು.

























