ಬೀದರ್:ಅ.೭: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ (೨೦೨೫-೨೬) ನೇಮಕಾತಿ ಪ್ರಕ್ರಿಯೆಯ ಅಂಗವಾಗಿ, ದಿನಾಂಕ ೦೫-೦೯-೨೦೨೫ರಿಂದ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಬೀದರ್ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಸುಧೀಂದ್ರ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷರು ಹಾಗೂ ಬೀದರ್ ಜಿಲ್ಲಾ ಪ್ರತಿನಿಧಿಯಾದ ವೆಂಕಟೇಶ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಎಸ್. ರಂಘುನಾಥ ಹಾಗೂ ರಾಜ್ಯ ಬ್ರಾಹ್ಮಣ ನಿಗಮ ಮಂಡಳ ಅಧ್ಯಕ್ಷರಾದ ಎ. ಜಯಸಿಂಹ ಹಾಗೂ ಇನ್ನಿತತರೂ ಉಪಸ್ಥಿತರಿದ್ದರು.























