ಜ.೧೬ ರಂದು ಬೀದರ ಏರ್ ಶೋ

ಬೀದರ, ಜ.೧೨: ಭಾರತೀಯ ವಾಯುಪಡೆ ಬೀದರ ವತಿಯಿಂದ ಬೀದರ ಕೋಟೆಯ ಆವರಣದ ಮೇಲೆ ದಿನಾಂಕ: ೧೬-೦೧-೨೦೨೬ ರಂದು ಮಧ್ಯಾಹ್ನ ೩ ಗಂಟೆಗೆ ಬೀದರ್ ಏರ ಶೋ ಹಮ್ಮಿಕೊಳ್ಳಲಾಗಿದೆ. ಬೀದರ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಬೀದರ ಏರ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ ೩ ಗಂಟೆಯೊಳಗೆ ಸಾರ್ವಜನಿಕರು ಬೀದರ ಕೋಟೆಯ ಒಳಗಡೆ ನಿಗದಿತ ಸ್ಥಳದೊಳಗೆ ಉಪಸ್ಥಿತರಿದ್ದು, ಬೀದರ ಏರ್ ಶೋ ವೀಕ್ಷಿಸಬಹುದಾಗಿದೆ ಎಂದು ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.