ಕೆಂಭಾವಿ:ಅ.26: ಇತಿಹಾಸ ಪ್ರಸಿದ್ದ ಪಟ್ಟಣದ ಆರಾಧ್ಯ ದೈವ ವಚನಕಾರ ಶರಣ ಭೋಗೇಶ್ವರ ದೇವಸ್ಥಾನದ ಶ್ರಾವಣದ ವ್ರತಾಚರಣೆ ಮತ್ತು ಕುಂಭಮೇಳ ಬಹು ಅದ್ದೂರಿಯಾಗಿ ರವಿವಾರ ಜರುಗಿತು. ಶ್ರಾವಣ ಮಾಸದ ಒಂದು ತಿಂಗಳ ವ್ರತಾಚರಣೆ ಕೈಗೊಂಡಿದ್ದ ಭೋಗೇಶ್ವರ ಸೇವಾದಳದ ಶರಣರಿಂದ ವ್ರತಾಚರಣೆ ಸಂಪನ್ನಗೊಂಡು ಮುಂಜಾನೆಯಿಂದ ಧಾರ್ಮಿಕ ವಿಧಿ ವಿಧಾನ ಪೂಜಾ ಕಾರ್ಯಕ್ರಮಗಳು ವೈದಿಕ ಪ್ರಮುಖ ಮತ್ತು ಆರ್ಚಕರಾದ ರಾಜಶೇಖರಯ್ಯಸ್ವಾಮಿ ಹೀರೆಮಠ ನೇತೃತ್ವದಲ್ಲಿ ನೇರವೆರಿದವು ನಂತರ ಶರಣ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಕುಂಭಮೇಳವು ಭಕ್ತಿಯ ಪರಾಕಷ್ಟೆಗೆ ಸಾಕ್ಷಿಯಾಯಿತು ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಡಂಬೇಲ್ಸ ಮತ್ತು ಲೇಜಿಮ? ನೃತ್ಯ ನೋಡುಗಳ ಕಣ್ಮನ ಸೇಳೆಯಿತು,ಈ ಉತ್ಸವದಲ್ಲಿ ಊರಿನ ಹಿರಿಯರು ಸೇರಿಂದತೆ ಅಕ್ಕ ಪಕ್ಕ ಗ್ರಾಮದ ಗ್ರಾಮಸ್ಥರು ಭಾಗವಹಿಸದ್ದರು























