ಅಂಬೇಡ್ಕರ್ ಯುವ ಸೇನೆಯ ಗ್ರಾಮ ಘಟಕ ಅಧ್ಯಕ್ಷರಾಗಿ ಭೀಮು ಮಲ್ಕಪಲ್ಲಿ ಆಯ್ಕೆ

ಸೇಡಂ,ಡಿ ,೨೨:ಅಂಬೇಡ್ಕರ್ ಯುವ ಸೇನೆ ಸೇನೆಯ ರಾಜ್ಯಧ್ಯಕ್ಷರಾದ ಶ್ರೀಮತಿ ಕೌಶಲ್ಯ ಹೆಚ್ ಕೋದಂಡರಾಮ್ ಹಾಗೂ ಕಲಬುರಗಿ ಜಿಲ್ಲೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಎ.ತಳಕೇರಿ ಸೇಡಂ ತಾಲೂಕ ಅಧ್ಯಕ್ಷ ಗೋಪಾಲ ನಾಟೇಕರ್ ರವರ ಆದೇಶದ ಮೇರೆಗೆ ಯುವ ಉತ್ಸಾಹಿ ಸಮಾಜ ಸೇವಕ ಮತ್ತು ಹಿಂದೆ ಅನೇಕ ದಲಿತಪರ ಹೋರಾಟಗಳಲ್ಲಿ ಹೋರಾಡುತ್ತಿರುವ ಮಲ್ಕಪಲ್ಲಿ ಗ್ರಾಮದ ಭೀಮು ಮಾಲ್ಕಪಲ್ಲಿ ಅವರನ್ನು ಗ್ರಾಮ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಹಾಗೂ ಉಪಾಧ್ಯಕ್ಷರಾಗಿ ಲಾಲಪ್ಪ ಮಲ್ಕಪಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ್ ಮಲ್ಕಪಲ್ಲಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ ಎಂದು ತಾಲೂಕ ಅಧ್ಯಕ್ಷ ಗೋಪಾಲ ನಾಟೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.