
ಬೀದರ್:ಜ.18: ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ಜಿಲ್ಲೆಯಲ್ಲಿ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಿದ್ದರು ಎಂದು ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮಂಗಲಾ ಮರಕಲೆ ಹೇಳಿದರು.
ನಗರದ ಗುಂಪಾ ರಸ್ತೆಯಲ್ಲಿ ಇರುವ ಯುನೈಟೆಡ್ ಆಸ್ಪತ್ರೆ ಸಮೀಪ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಭೀಮಣ್ಣ ಖಂಡ್ರೆ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಖಂಡ್ರೆ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಬೀದರ್ ಸೇರಿ ವಿವಿಧೆಡೆ ಶಾಲಾ, ಕಾಲೇಜುಗಳನ್ನು ತೆರೆದಿದ್ದರು ಎಂದು ತಿಳಿಸಿದರು.
ಖಂಡ್ರೆ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ರಾಜ್ಯದ ಏಳಿಗೆಗೆ ದುಡಿದಿದ್ದರು. ಅವರ ಕೊಡುಗೆಯನ್ನು ಎಂದೂ ಮರೆಯಲಾಗದು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸುನೀತಾ ವೀರೇಶ ದೇಶಮುಖ, ಭಾಗ್ಯಶ್ರೀ ಮರಕಲೆ, ಗೀತಾ ಶ್ರೀಹರಿ, ಅನೂಷಾ ಬೀದರ್, ಸವಿತಾ ವೆಂಕಟೇಶ್, ವಿಲಾಸಮತಿ, ಸಂಗೀತಾ, ಸಾಕ್ಷಿ ಸಿದ್ದು, ಉಷಾ ದತ್ತಾತ್ರಿ, ಸಂಗೀತಾ ಅಶೋಕ್, ಜ್ಯೋತಿ ಮಲ್ಲೇಶ ದೇಶಮುಖ, ಭಾಗ್ಯಶ್ರೀ ಅಂಬರೀಷ್ ದೇಶಮುಖ ಮತ್ತಿತರರು ಹಾಜರಿದ್ದರು.




























