ಗಮನಸೆಳೆದ ನಾಟ್ಯಮಯೂರಿ ಸಂಸ್ಥೆಯ ಭರತನಾಟ್ಯ

ನಿಡಗುಂದಿ: ಪಟ್ಟಣದ ವೀರೇಶ ನಗರದಲ್ಲಿ ಮಹಾನವಮಿಯ ವಿಜಯದಶಮಿ ಅಂಗವಾಗಿ ನವರಾತ್ರಿ ಉತ್ಸವ ಜರುಗಿತು.
ನವರಾತ್ರಿ ಉತ್ಸವದಲ್ಲಿ ಸ್ಥಳೀಯ ನಾಟ್ಯಮಯೂರಿ ಭರತನಾಟ್ಯ ಡಾನ್ಸ್ ಕ್ಲಾಸಿನ ಗುರುಮಾತೆ ಆರತಿ ಹೊಸಮನಿ ಮತ್ತು ಅವರ ವಿದ್ಯಾರ್ಥಿಗಳ ತಂಡದಿAದ ಸತತ ೧೧ ದಿನಗಳ ಕಾಲ ಭರತನಾಟ್ಯ, ಶಿವ
ತಾಂಡವ ನೃತ್ಯ, ಭಕ್ತ ಪ್ರಹ್ಲಾದನ ಕಥೆ, ಕವಿರತ್ನ ಕಾಳಿದಾಸ , ಶ್ರೀದೇವಿ ನೃತ್ಯ ಸೇರಿದಂತೆ ವಿವಿಧ ನೃತ್ಯ ಪ್ರದರ್ಶನ ನೀಡಿ ಜನತೆಯ ಗಮನ ಸೆಳೆದರು.
ಆರತಿ ಹೊಸಮನಿಯವರು ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭರತನಾಟ್ಯ ವಿಭಾಗದಲ್ಲಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, ಹತ್ತು ವರ್ಷಗಳಿಂದ ಭರತನಾಟ್ಯವನ್ನು ಕಲೆ
ಬೆಳೆಸಲು ನಿಡಗುಂದಿಯಲ್ಲಿ ನೂರಾರು ಮಕ್ಕಳಿಗೆ ತರಬೇತಿ ನೀಡಿ ಪ್ರದರ್ಶಿಸಿದ್ದಾರೆ.
ಈ ಕುರಿತು ಮಾತನಾಡಿದ ನಾಟ್ಯಮಯೂರಿ ಸಂಸ್ಥೆಯ ಅಧ್ಯಕ್ಷೆ ಆರತಿ ಹೊಸಮನಿ ಅವರು ಭರತ ನಾಟ್ಯ ಎನ್ನುವುದು ಕೆಲ ಪ್ರದೇಶ ಮತ್ತು ಕೆಲವರಿಗೆ ಮಾತ್ರ ಮೀಸಲು ಎನ್ನುವಂತಾಗಿದೆ. ಆದ್ದರಿಂದ ದೇಶದ ಪ್ರಾಚೀನ
ಕಲೆಯೊಳಗೊಂದಾಗಿರುವ ಭರತನಾಟ್ಯವನ್ನು ಗ್ರಾಮೀಣ ಭಾಗದಲ್ಲಿನ ಮಕ್ಕಳು ಕಲಿಯಬೇಕು. ಇದರಿಂದ ಕಲೆ ಬೆಳೆಯುವದರೊಂದಿಗೆ ಮಕ್ಕಳ ಆರೋಗ್ಯಕ್ಕೂ ಸಹಕಾರಿ ಆಗಲಿದೆ. ಸಮಾಜದ ಸ್ವಾಸ್ಥ್ಯಸುಧಾರಿಸಲು ಸಹಕಾರಿ ಆಗಲಿದೆ ಎಂದು ಹೇಳಿದರು.