Home ಜಿಲ್ಲೆ ಭರತನಾಟ್ಯವೆಂಬುದು ಜನಪ್ರಿಯತೆ ಗಳಿಸಿಕೊಂಡಿದೆ:ನ್ಯಾಯವಾದಿ ಸಾಲಿಮಠ

ಭರತನಾಟ್ಯವೆಂಬುದು ಜನಪ್ರಿಯತೆ ಗಳಿಸಿಕೊಂಡಿದೆ:ನ್ಯಾಯವಾದಿ ಸಾಲಿಮಠ

ತಾಳಿಕೋಟೆ : ಇಂದಿನ ದಿನಮಾನದಲ್ಲಿಯ ಹಾಗೂ ಹಿಂದಿನ ದಿನಮಾನದಲ್ಲಿಯ ನಾಟ್ಯ ಕಲೆಗಳ ಮೂಲ ಉದ್ದೇಶಗಳಲ್ಲಿ ಬಹುಮಟ್ಟಿಗೆ ಮನರಂಜನೆ ಕಂಡುಬಂದರೂ ಕಲಾಪ್ರದರ್ಶನದ ಕೀರ್ತಿ ಸಂಪಾದನೆ ಹಾಗೂ ಧನ ಸಂಪಾದನೆಯ ಕಾರ್ಯವೂ ಆಗಿದೆ ಇಂತಹ ಕಾರ್ಯವನ್ನು ಲಕ್ಷಿಸದೇ ತಮ್ಮದೇ ಆದ ಶ್ರೀ ಖಾಸ್ಗತಮಠದ ಶ್ರೀಗಳ ಮಾರ್ಗದರ್ಶನದೊಂದಿಗೆ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯೊಂದನ್ನು ಪ್ರಾರಂಭಿಸಿಕೊಂಡು ಮುನ್ನಡೆದು ಉಚಿತವಾಗಿ ವಿದ್ಯಾರ್ಥಿಗಳಿಗೆ ಜ್ಞಾನಮೂಡಿಸುವ ಕಾರ್ಯದಲ್ಲಿ ತೊಡಗಿರುವ ಶ್ರೀ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆಯ ಅಧ್ಯಕ್ಷ ವಿನೋದಕುಮಾರ ಚಿಕ್ಕಮಠ ಅವರ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದು ಮುದ್ದೇಬಿಹಾಳದ ಹಿರಿಯ ನ್ಯಾಯವಾದಿಗಳಾದ ವಿಜಯಮಹಾಂತೇಶ ಸಾಲಿಮಠ ಅವರು ನುಡಿದರು.
ರವಿವಾರರಂದು ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆಯ 7 ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಹಾಗೂ 2 ತಿಂಗಳ ಪರ್ಯಂತ ಉಚಿತ ತರಬೇತಿ ಪಡೆದ ವಿದ್ಯಾರ್ಥಿಗಳ ಕುರಿತು ಏರ್ಪಡಿಸಲಾದ ಸಮಾರೋಪ ಸಮಾರಂಭದಲ್ಲಿ ರಾಜ್ಯಪ್ರಶಸ್ತಿ ಸ್ವೀಕರಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಆಧುನಿಕ ಕುಣಿತದ ಭರಾಟೆಯಲ್ಲಿ ಪ್ರಾಚೀನ ನಾಟ್ಯ ಪದ್ದತಿಗಲಾದಂತಹ ಭರತನಾಟ್ಯವೇ ಮೊದಲನೇಯ ನಾಟ್ಯಕಲೆಯಾಗಿದ್ದರೂ ಇದು ಭಾರತದೇಶದ ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ ಎಂದು ಹೇಳಿದ ಸಾಲಿಮಠ ಅವರು ಭರತನಾಟ್ಯ ಪ್ರದರ್ಶಿಸಿದ ಕುಮಾರಿ ಸೃಷ್ಠಿ ಹಿರೇಮಠ ಅವರಿಗೆ 2000 ರೂ ಸ್ಥಳದಲ್ಲಿಯೇ ಪ್ರಶಸ್ತಿ ನೀಡಿ ಗೌರವಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತರಾದ ಜಿ.ಟಿ. ಘೋರ್ಪಡೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಭರತನಾಟ್ಯವೆಂಬುದು ಶ್ರೀ ಖಾಸ್ಗತರ ಕಾಲದಿಂದಲೂ ಸಾಗಿಬಂದಿದೆ ಇಂತಹದ್ದನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶ ಹೊತ್ತ ಭರತನಾಟ್ಯ ಸಂಸ್ಥೆಯ ಅಧ್ಯಕ್ಷ ವಿನೋದ ಚಿಕ್ಕಮಠ ಅವರು ಇಂದು ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಲು ಆಯ್ಕೆಮಾಡಿರುವ ಸಾಧಕರುಗಳಲ್ಲಿ ಶಾಸನಾಂಗ ಕಾರ್ಯಾಂಗ ನ್ಯಾಯಾಂಗ ಪತ್ರಿಕಾರಂಗವೂ ಒಳಗೊಂಡಿರುವದು ಸಂತಸ ತಂದಿದೆ ಈ ಭರತನಾಟ್ಯ ಸಂಸ್ಥೆ ಉತ್ತರೋತ್ರವಾಗಿ ಬೆಳೆಯಲು ಸತ್ಯ ಧರ್ಮ ಪ್ರೇಮ ಶಾಂತಿಯ ವಿಚಾರದೊಂದಿಗೆ ನಮ್ಮ ಪತ್ರಿಕಾಧರ್ಮ ಪಾಲಿಸುತ್ತಾ ಸರ್ಕಾರದ ಗಮನ ಸೆಳೆದು ಈ ಸಂಸ್ಥೆಯನ್ನು ಮೇಲ್ಮಟ್ಟಕ್ಕೇರುವಂತಹ ಕಾರ್ಯಕ್ಕೆ ಮುಂದಾಗುತ್ತೇವೆಂದರು.
ಇನ್ನೋರ್ವ ರಾಜ್ಯಪ್ರಶಸ್ತಿ ಪಡೆದ ಅಸ್ಕಿ ಪೌಂಡೇಶನ್ ಅದ್ಯಕ್ಷರಾದ ಸಿ.ಬಿ. ಅಸ್ಕಿ ಅವರು ಮಾತನಾಡಿ 18 ಜನಕ್ಕೆ ವಿವಿಧ ವೃತ್ತಿಯಲ್ಲಿದ್ದವರನ್ನು ಆಯ್ಕೆಮಾಡಿ ವಿವಿಧ ಕ್ಷೇತ್ರದಲ್ಲಿ ಮುನ್ನಡೆದಂತಹವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲು ಮುಂದಾದ ವಿನೋದ ಚಿಕ್ಕಮಠ ಅವರು ಉಚಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಸಾಗಿರುವದು ಹೆಮ್ಮೆಯ ವಿಷಯವಾಗಿದೆ ಜಾನಪದ ಕಲೆಯೆಂಬುದು ನಮ್ಮ ಭಾಗದಲ್ಲಿ ಹೆಚ್ಚಾಗಿದ್ದರೂ ಭರತನಾಟ್ಯ ಕಲೆಯೆಂಬುದನ್ನು ವಿನೋದ ಅವರು ವಿರಕ್ತೇಶ್ವರ ಎಂಬ ಹೆಸರನ್ನಿಟ್ಟುಕೊಂಡು ಮುನ್ನಡೆದಿದ್ದರಿಂದ ಈ ಸಂಸ್ಥೆ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಜಪ ಜಿಲ್ಲಾ ಮಾಜಿ ಅಧ್ಯಕ್ಷರಾದ ಆರ್.ಎಸ್. ಪಾಟೀಲ(ಕೂಚಬಾಳ) ಅವರು ಇಂದಿನ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮ ಇಂದಿನದ್ದಾಗಿದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವದು ಸಂತಸ ತಂದಿದೆ ಈ ಸಂಘಟನೆಯ ಸಂಘಟಿಕರ ಮಾಡುವಂತಹ ಕಲೆಗೆ ಬೆಲೆಯೇ ಕಟ್ಟಲಾಗದು ಖಾಸ್ಗತ ಶಿವಯೋಗಿಗಳ ಆಶೀರ್ವಾದ ಸದಾ ಈ ಸಂಸ್ಥೆಯ ಮೇಲಿದೆ ಈ ಸಂಸ್ಥೆ ಇನ್ನೂ ಮೇಲ್ಮಟ್ಟೆ ಬೆಳೆಯಲಿದೆ ಎಂದರು.
ಖ್ಯಾತ ಸಂಗೀತಗಾರರಾದ ಗವಾಯಿ ಬಸವರಾಜ ಭಂಟನೂರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶ್ರೀಮತಿ ನೀಲಮ್ಮ ಅರಳಿಗುಂಡಗಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವದರೊಂದಿಗೆ ವೇ|| ವಸಂತಭಟ್ ಜೋಷಿ ಅವರು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಹಿರಿಯ ಪತ್ರಕರ್ತರು ಸಂಪಾದಕರಾದ ಪುಂಡಲೀಕ ಮುರಾಳ, ಶಂಕರ್ ಹೆಬ್ಬಾಳ, ಡಾ. ಎಸ್.ಎಸ್. ಪಾಟೀಲ ಅವರಿಗೆ ಮಾಧ್ಯಮಕ್ಷೇತ್ರದಲ್ಲಿ ಸಾಧನೆ ಮಾಡಿದ್ದರ ಕುರಿತು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದು ಅಲ್ಲದೇ ವೇ|| ಗಜದಂಡಯ್ಯ ಹಿರೇಮಠ(ಆದ್ಯಾತ್ಮಿಕ ಕ್ಷೇತ್ರ), ಮಹಾಂತೇಶ ತಾಳಿಕೋಟೆ(ರಂಗಭೂಮಿ ಕ್ಷೇತ್ರ), ಸಂಜೀವಕುಮಾರಿ ಹಜೇರಿ(ಕ್ರೀಡಾ), ಲಕ್ಷ್ಮಣಸಿಂಗ್ ವಿಜಾಪೂರ(ಸಂಗೀತಗಾಯನ), ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ, ಹಾಗೂ ನ್ಯಾಯವಾದಿ ವಿಜಯಮಹಾಂತೇಶ ಸಾಲಿಮಠ(ಸಾಮಾಜಿಕ ಸೇವೆ), ಸಿದ್ರಾಮ ನೆಲಜಗಿ(ಜಾನಪದ,ಡೊಳ್ಳಿನಪದ), ಶಶಿಧರ ಬಿರಾದಾರ(ಸಂಗೀತ ತಬಲಾ), ಕುಮಾರಿ ಕೃತಿಕಾ ಜಂಗಿನಮಠ(ಸಂಗೀತ ಕೊಳಲುವಾದನ), ಶಂಕರದೇವರು ಹಿರೇಮಠ(ಸಾಹಿತ್ಯ), ಮುರುಗೆಪ್ಪ ಹಣಮನಹಳ್ಳಿ(ಸಾಹಿತ್ಯ), ಅಸ್ಲಂ ಮುಲ್ಲಾ(ಜಾನಪದ), ಕುಮಾರಿ ವರ್ಷಿಣಿ ಪತ್ತಾರ(ಭರತನಾಟ್ಯ), ಕುಮಾರಿ ಎಂ.ಬಿ. ಶ್ರೇಯಾ(ರಂಗಭೂಮಿ) ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೇವೆ ಗುರಿತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಖಾಸ್ಗತೇಶ್ವರ ಮಠದ ವೇ|| ಮುರುಘೇಶ ವಿರಕ್ತಮಠ, ತೊರವಿಯ ಪ.ಪೂ. ಶ್ರೀ ಮುರುಘೇಂದ್ರದೇವರು, ಜಯಸಿಂಗ್ ಮೂಲಿಮನಿ, ಭರತನಾಟ್ಯ ಸಂಸ್ಥಾಪಕ ವಿನೋದಕುಮಾರ ಚಿಕ್ಕಮಠ, ಕಾರ್ಯದರ್ಶಿ ಮಂಜುನಾಥ ಹೆಗಡೆ, ಕಿಶೋರ ಹಜೇರಿ, ಮಾತೋಶ್ರೀ ಸರಸ್ವತಿ ಚಿಕ್ಕಮಠ, ಶ್ರಿಮತಿ ಜ್ಯೋತಿ ಎಂ ಹೆಗಡೆ, ಕಾಶೀನಾಥ ಕಟ್ಟಿಮನಿ, ಕಾಮಿಡಿ ಕಿಲಾಡಿಯ ಮಹಾಂತೇಶ ತಾಳಿಕೋಟೆ, ನಾಟ್ಯ ಮಯೂರಿ ಪೃಥ್ವಿ ಹೆಗಡೆ, ಕುಮಾರಿ ಶೃಷ್ಠಿ ಹಿರೇಮಠ ಮೊದಲಾದವರು ಉಪಸ್ತಿತರಿದ್ದರು. ಶಿಕ್ಷಕ ರಮೆಶ ಯರಕ್ಯಾಳ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಂತರ ಭರತನಾಟ್ಯ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಹಾಗೂ ಜಾನಪದ ಸಂಗೀತ ಗಾಯನ ಜರುಗಿತು.
ಗವಾಯಿಗಳಾದ ದೀಪಕಸಿಂಗ್ ಹಜೇರಿ ಹಾಗೂ ಗೋವಿಂದಸಿಂಗ್ ಹಜೇರಿ ಸಂಗೀತ ಸೇವೆ ಸಲ್ಲಿಸಿದರು. ಶಿಕ್ಷಕಿ ಶ್ರೀಮತಿ ಮಡಿವಾಳಮ್ಮ ನಾಡಗೌಡ ಸ್ವಾಗತಿಸಿದರು. ಬಿ.ವಾಯ್. ಚವನಬಾವಿ ನಿರೂಪಿಸಿದರು. ಭಾಗಣ್ಣ ಅರೇನಾಳ ವಂದಿಸಿದರು.