ಜನಾರ್ದನ ರೆಡ್ಡಿ ವಿರುದ್ಧ ಭರತ್‌ರೆಡ್ಡಿ ಆಕ್ರೋಶ

ಬಳ್ಳಾರಿ, ಜ. ೨-ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆ ತೀವ್ರ ರೂಪಕ್ಕೆ ಹೋಗಿ ಓರ್ವ ಯುವಕ ಸಾವನ್ನಪ್ಪಿರುವ ಬಗ್ಗೆ ನಾರಾ ಭರತ್ ರೆಡ್ಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ತಮ್ಮ ವಿರೋಧಿಗಳ ಗುಂಪಿನಿಂದಲೇ ಗುಂಡು ಹಾರಿಸಲಾಗಿದೆ.

ಯುವಕನ ಸಾವಿಗೆ ಜನಾರ್ದನರೆಡ್ಡಿ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಮೃತಪಟ್ಟ ಯುವಕನ ತ್ಯಾಗವು ಮಹರ್ಷಿ ವಾಲ್ಮೀಕಿ ಅವರ ಉದ್ದೇಶಗಳಿಗಾಗಿ ಮತ್ತು ಜನಾರ್ದನ ರೆಡ್ಡಿ ರಾಜಕೀಯ ಅಂತ್ಯಕ್ಕಾಗಿ ಆಗಿದೆ. ಜನಾರ್ದನ ರೆಡ್ಡಿ ಎಂತಹ ಹೇಡಿ ಮತ್ತು ಅವರು ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಜನರಿಗೆ ತೋರಿಸುತ್ತೇನೆ ಎಂದು ಈ ವೇಳೆ ಭರತ್‌ರೆಡ್ಡಿ ಶಪಥ ಕೂಡ ಮಾಡಿದ್ದಾರೆ.


ಜನಾರ್ದನರೆಡ್ಡಿ ಹತ್ಯೆಗೆ ಸಂಚು ಮಾಡುವ ಅಗತ್ಯ ನನಗಿಲ್ಲ. ಜನಾರ್ದನರೆಡ್ಡಿ ಏನು ದೊಡ್ಡ ಪಾಳೆಗಾರನ ಎಂದು ಹರಿಹಾಯ್ದ ಅವರು ಜನಾರ್ದನ ರೆಡ್ಡಿಯ ಚಿಲ್ಲರೆ ರಾಜಕೀಯ ನನ್ನ ಮುಂದೆ ನಡೆಯಲ್ಲ ಎಂದು ಕಿಡಿಕಾರಿದರು.