ಭಕ್ತಿ – ಬದುಕು” ವಿಶೇಷ ಉಪನ್ಯಾಸ


ಹುಬ್ಬಳ್ಳೀ,ನ.೨೫:ಭಕ್ತಿ ಎಂದರೆ ನಮ್ಮ ಆರಾಧ್ಯ ದೇವರ ಮೇಲೆ ಉಂಟಾಗುವ ಶ್ರದ್ಧೆ, ಪ್ರೀತಿ, ನಿಷ್ಠೆ , ಮತ್ತು ಸಂಪೂರ್ಣ ಸಮರ್ಪಿಸುವ ಮಾರ್ಗ. ಮನಸ್ಸು, ಬುದ್ಧಿ ಮತ್ತು ಭಾವನೆಗಳನ್ನು ದೇವರಲ್ಲಿ ಲೀನಗೊಳಿಸುವ ಆತ್ಮೀಯ ಮಾರ್ಗ. ಜ್ಞಾನ, ಕರ್ಮ ಮತ್ತು ಯೋಗ ಮಾರ್ಗಗಳಂತೆ ಮೋಕ್ಷಕ್ಕೆ ದಾರಿ ತೋರಿಸುವ ಪ್ರಮುಖ ಸಾಧನವೇ ಭಕ್ತಿ ಎಂದು ನ್ಯಾಯರತ್ನ ವಿದ್ವಾನ್ ಡಾ. ಶಾಸ್ತಿçಗಳು ಅಭಿಪ್ರಾಯಪಟ್ಟರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಜರುಗಿದ “ಭಕ್ತಿ – ಬದುಕು” ಬಗ್ಗೆ ಉಪನ್ಯಾಸದಲ್ಲಿ ಮಾತನಾಡುತ್ತಾ ಮೋಕ್ಷ ಸಾಧನೆಗೆ ವಿಶೇಷ ಸಾಮಗ್ರಿಯೆ ಭಕ್ತಿ. ಯಾವ ದೇವರಲ್ಲಿ ಭಕ್ತಿ ಮಾಡುತ್ತೇವೆಯೋ ಆ ದೇವರ ಬಗ್ಗೆ ನಮಗೆ ಯಥಾರ್ಥ ಜ್ಞಾನ ಹೊಂದಿರಬೇಕು. ಭಕ್ತಿಯಲ್ಲಿ ಚಂಚಲ ಮನಸ್ಸನ್ನು ಕೂಡಾ ಕರಗಿಸುವ ವಿಶೇಷ ಶಕ್ತಿ ಹೊಂದಿರುತ್ತದೆ ಎಂದು ಸುಂದರವಾಗಿ. ಲೌಕಿಕ ಉದಾಹರಣೆಗಳೊಂದಿಗೆ ವಿಶ್ಲೇಷಿಸುತ್ತಾ , ಭಕ್ತಿಗಳಲ್ಲಿ ಅನೇಕ ವಿಧಗಳಿದ್ದರು, ಪ್ರಧಾನವಾಗಿ ಶಾಸ್ತçಗಳಲ್ಲಿ ( ೯ ) ನವ ವಿಧವಾಗಿ ವಿಭಜಿಸಲ್ಪಟ್ಟಿದೆ. ಶ್ರವಣ, ಕೀರ್ತನ, ಸ್ಮರಣ, ಪಾದ ಸೇವನಾ, ಅರ್ಚನಾ, ವಂದನ, ದಾಸ್ಯ, ಸಖ್ಯ ,ಆತ್ಮ ನಿವೇದನ ಇವುಗಳಲ್ಲಿ ನಾವು ಯಾವ ಮಾರ್ಗವನ್ನು ಅನುಸರಿಸಿದರು ಭಕ್ತಿ ಶುದ್ಧವಾಗಿದ್ದರೆ ನಮ್ಮ ಎಲ್ಲರ ಬದುಕು ಬಂಗಾರವಾಗುತ್ತದೆ ಎಂದು ತಿಳಿಸಿದರು.