
ಕಾಳಗಿ : ತಾಲೂಕಿನ ಹುಲಸಗೂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯಶಿಕ್ಷಕ ಪಿತಾಂಬರ್ ಮಡಿವಾಳ ಅವರ ಸುಮಾರು 25ವರ್ಷಗಳ ಶಿಕ್ಷಕ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಜನತಾಪ್ರಭ ದಿನಪತ್ರಿಕೆ ಹಾಗೂ ಆರ್ಯಭಟ ಎಜುಕೇಶನ್ ಟ್ರಸ್ಟ್ ವತಿಯಿಂದ ಅತ್ಯುತ್ತಮ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚೆಗೆ ಬೆಂಗಳೂರಿನ ಬಿ.ಎಂ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜನತಾಪ್ರಭ ದಿನಪತ್ರಿಕೆ ಹಾಗೂ ಆರ್ಯಭಟ ಎಜುಕೇಶನಲ್ ಟ್ರಸ್ಟ್ ಕರ್ನಾಟಕ ಇವರ ಸಹಯೋಗದಲ್ಲಿ ಸಾಧಕರ ಸಮಾಗಮ ಕಾರ್ಯಕ್ರಮದಲ್ಲಿ ಕಾಳಗಿ ತಾಲೂಕಿನ ಹುಲಸಗೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಪಿತಾಂಬರ್ ಮಡಿವಾಳ ಅವರ ಶಿಕ್ಷಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲೆ, ಸಾಹಿತ್ಯ ಮತ್ತು ಸಾಂಸ್ಕøತಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಆರ್ ಮಲ್ಲಿಕಾರ್ಜುನಯ್ಯ ಅವರು ಡಾ.ಎಸ್ ರಾಧಾಕೃಷ್ಣನ್ ಅತ್ಯುತ್ತಮ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಾಸ್ಯನಟ ಡಿಂಗ್ರಿ ನಾಗರಾಜ ಸೇರಿದಂತೆ ಅನೇಕರು ಇದ್ದರು.
ಅಭಿನಂದನೆ : ಹುಲಸಗೂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಪಿತಾಂಬರ್ ಮಡಿವಾಳ ಅವರಿಗೆ ರಾಷ್ಟ್ರೀಯ ಅತ್ಯುತ್ತಮ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರಧಾನ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾಳಗಿ ತಾಲೂಕಾಧ್ಯಕ್ಷ ಸಂತೋಷ ಕಲಮೂಡ, ಪ್ರಧಾನ ಕಾರ್ಯದರ್ಶಿ ಬಸವಂತರಾಯ ಪೆದ್ದಿ ರಾಜಾಪೂರ, ಖಜಾಂಚಿ ಯೂಸುಫ್ ಖಾನ್, ಕರ್ನಾಟಕ ರಾಜ್ಯ ಪದವಿದರ ಪ್ರಾಥಮಿಕ ಶಿಕ್ಷಕರ ಸಂಘದ ಕಾಳಗಿ ತಾಲೂಕಾಧ್ಯಕ್ಷ ದೇವಿಂದ್ರ ಓಕಳಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ರೋಳೆ, ಸಂಘಟನಾ ಕಾರ್ಯದರ್ಶಿ ನಾಗರಾಜ ಮಡಿವಾಳ ಸೇರಿದಂತೆ ಹುಲಸಗೂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು.























