ಬಡತನದಲ್ಲಿ ಹುಟ್ಟಿ, ಬಡತನದಲ್ಲಿ ಸಾಯುವುದು ಘೋರ ಪಾಪ : ನಂದಕುಮಾರ

ಔರಾದ್ : ಅ.22:ಬಡತನದಲ್ಲಿ ಹುಟ್ಟಿ, ಬಡತನದಲ್ಲಿಯೇ ಸಾಯುವುದು ಘೋರ ಪಾಪವಾಗಿದೆ. ಮಾನವ ಜನ್ಮ ಸಾರ್ಥಕವಾಗಬೇಕಾದರೇ ಸಮಾಜವಲ್ಲದಿದ್ದರೂ ತನ್ನ ಪರಿವಾರಕ್ಕಾದರೂ ನೆರವಾಗಬೇಕು . ಆಗ ಮಾತ್ರ ಜನುಮ ಸಾರ್ಥಕವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಜನ ಜಾಗ್ರತಿ ವೇದಿಕೆ ಶಿಬಿರಾಧಿಕಾರಿ ನಂದಕುಮಾರ ಹೇಳಿದರು.

ಪಟ್ಟಣದ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿ , ಶಿಬಿರಾರ್ಥಿಗಳಿಗೆ ತಿಳಿಹೇಳಿದ ಅವರು, ಭೂಮಿಯ ಮೇಲೆ ಅನೇಕ ಮಹಾನುಭಾವರು ಜನ್ಮ ತಾಳಿ ಅಮೋಘವಾದ ಕೆಲಸಕಾರ್ಯಗಳನ್ನು ಮಾಡಿ, ಅವರು ದೇಹಾಂತವಾದರೂ ಸಹ ಅವರ ಹೆಸರು ಇನ್ನು ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ದೇಶದಲ್ಲಿ ನಮ್ಮ ನಾಡಿನಲ್ಲಿ ಸತ್ತು ಬದುಕಿದ ಅನೇಕ ಮಹಾನ್ ವ್ಯಕ್ತಿಗಳನ್ನು ದಿನಾಲು ಸರಣೆ ಮಾಡುತ್ತವೆ. ಅಂತವರ ಆದರ್ಶಗಳನ್ನು ನಾವೆಲ್ಲರು ಕಲಿಯಬೇಕು. ಕುಡಿತದ ಸಹವಾಸ, ಮನೆಮಂದಿಯೆಲ್ಲ ಉಪವಾಸ ಅನ್ನುವ ಹಾಗೆ ಕೆಟ್ಟ ವ್ಯಸನಕ್ಕೆ ದಾಸನಾದ ವ್ಯಕ್ತಿಯ ಜೀವನ ಬರಿಗೋಳಾಗಿದೆ. ಸಮಾಜದಲ್ಲಿ ಲೇಸೆನ್ನುವ ಕೆಲಸ ಮಾಡಿ, ಬದುಕು ಸಾರ್ಥಕ ಮಾಡಿಕೊಳ್ಳಬೇಕು. ಹುಟ್ಟುವುದು ಸಹಜ, ಸಾಯುವುದು ಸಹಜ. ಆದರೇ ಇವರೆಡರ ಮಧ್ಯೆದಲ್ಲಿ ನಾವೆಷ್ಟು ಇರುತ್ತೆವು. ಆ ದಿನಗಳಲ್ಲಿ ಮಾಡಿದ ನಮ್ಮ ಸತ್ಕಾರ್ಯಗಳ ಬಗ್ಗೆ ಜನ ಹೋಗಳುವಂತೆ ಬದುಕಬೇಕು ಎಂದು ಕೀವಿ ಮಾತು ಹೇಳಿದರು.

ತಹಸೀಲ್ದಾರ ಮಹೇಶ ಪಾಟೀಲ ಅವರು ಮಾತನಾಡಿ ನಶೆಯಲ್ಲಿನ ಅಮಲು ಆರ್ಥಿಕ, ಸಾಮಾಜಿಕ, ದೈವಿಕ, ಸಾಂಸಾರಿಕ ಸ್ಥಾನಮಾನವನ್ನು ನಾಶ ಮಾಡಿ ಅಜ್ಞಾನದಲ್ಲಿ ಮುಳುಗಿಸುತ್ತದೆ.ಇಂತಹ ಕೆಟ್ಟ ವ್ಯಸನಗಳಿಂದ ಮುಕ್ತಿದೊರಕಿಸಿಕೊಡುವ ಶಿಬಿರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿ ಬದುಕು ಬಂಗಾರವಾಗಿಸಲು ಶ್ರಮಿಸುತ್ತಿರುವುದು ಅತ್ಯಂತ ಪವಿತ್ರ ಕಾರ್ಯಗಳಲ್ಲೊಂದಾಗಿದೆ ಎಂದರು.

ಪಟ್ಟಣದ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ 1966ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ, ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಚಟಗಳು ಮನುಷ್ಯನನ್ನು ಕುರುಡನ್ನಾಗಿಸುತ್ತವೆ. ಮನುಷ್ಯ ಜೀವನವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆದುಕೊಂಡು ಜೀವನದ ಸರ್ವಸ್ವವನ್ನು ಕೆಡಿಸುವ ಶಕ್ತಿ ವ್ಯಸನಕ್ಕಿದೆ. ಮದ್ಯವರ್ಜನ ಶಿಬಿರದಲ್ಲಿ ತನ್ನ ಶಕ್ತಿಯನ್ನು ತಾನೇ ಅರ್ಥಮಾಡಿಕೊಂಡು ಬದುಕುವ ಆತ್ಮ ಸ್ಥೈರ್ಯವನ್ನು ಪಡೆಯಲು ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಇದರಿಂದ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರಳಿಧರ್ ಎಚ್.ಎಲ್ ಮಾತನಾಡಿ, 8 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಎಲ್ಲರು ಭಾಗವಹಿಸಬೇಕು. ಅಮಲು ಸೇವನೆ ವಿಶ್ವದ ದೊಡ್ಡ ರೋಗವಾಗಿ ಪರಿಣಮಿಸಿದೆ. ಧರ್ಮಸ್ಥಳ ಮಂಜುನಾಥರ ಆರ್ಶಿವಾದದಿಂದ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರ ಆಯೋಜನೆ ಮಾಡಿ, ಮಧ್ಯಪಾನ ಚಟ ಮುಕ್ತರಾಗಿಸುವ ಸಂಕಲ್ಪಮಾಡಿ ಪುಣ್ಯದ ಕಾರ್ಯದಲ್ಲಿ ತೊಡಗಿರುವುದು ಉತ್ತಮ ಸಂಗತಿಯಾಗಿದ್ದು, ಇಂತಹ ಪುಣ್ಯದ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡು ಚಟದಿಂದ ಮುಕ್ತಿಪಡೆದು ಉತ್ತಮ ಬದುಕಿಗೆ ಧಾರಿದೀಪವಾಗಬೇಕು ಎಂದರು.

ಶಿಬಿರದಲ್ಲಿ ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ , ಸುಧಾಕರ್ ಕೊಳ್ಳುರ್, ಕಲ್ಲಪ್ಪ ದೇಶಮುಖ ಮಾತನಾಡಿದರು.
ಶಿಬಿರದಲ್ಲಿ ಔರಾದ್, ಕಮಲನಗರ ತಾಲೂಕಿನ ವಿವಿಧ ಹಳ್ಳಿಗಳಿಂದ 100ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, ಶಿಬಿರ ಪ್ರಯೋಜನೆ ಪಡೆಯಲಿದ್ದಾರೆ.

ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ತಾಲೂಕು ಅಧ್ಯಕ್ಷ ಅಶೋಕ ಶೆಂಬೆಳ್ಳಿ ಅಧ್ಯಕ್ಷತೆ ವಹಿಸದರು. ಪಪಂ ಅಧ್ಯಕ್ಷೆ ಸರೂಬಾಯಿ ಘುಳೆ, ಶಿವಾನಂದ ಮೋಕ್ತೆದಾರ್, ಗುಂಡಯ್ಯ ಸ್ವಾಮಿ, ಬಂಡೆಪ್ಪ ಕಂಟೆ, ಶಿವರಾಜ್ ಅಲಮಾಜೆ, ಶಾಲಿವಾನ್ ಉದಗಿರೆ, ಶರಣಪ್ಪ ಪಾಟೀಲ್, ರಾಘವೇಂದ್ರ ಗೌಡಾ, ಪ್ರವೀಣ ಕಾರಬಾರಿ, ಶಿವಶರಣಪ್ಪ ವಲ್ಲಾಪೂರೆ, ರಾಜೇಶ, ನಂದಕುಮಾರ್, ಪ್ರೇಶಿಲ್ಲಾ ಡಿಸೋಜಾ, ವಿಲಾಸ ಪೂಜಾರಿ, ಮಲ್ಲಿಕಾರ್ಜುನ ಪಾಟೀಲ್, ಬೀರಪ್ಪ, ಲಕ್ಷ್ಮಿಕಾಂತ, ಆದೇಶ, ಅಂಕುಶ, ಸಂಗೀತಾ, ಪೂಜಾ, ಸುರೇಖಾ, ಭಾರತಿ, ಕಾವೇರಿ, ಮನಿಶಾ ರೆಡ್ಡಿ, ಭೂದೇವಿ ಇತರರಿದ್ದರು.


ಶಿಬಿರದಲ್ಲಿ ಮನೋದೈಹಿಕ ಚಿಕಿತ್ಸೆ, ಗುಂಪು ಚಿಕಿತ್ಸೆ, ಕೌಟುಂಬಿಕ ಮತ್ತು ವೈಯುಕ್ತಿಕ ಸಲಹೆ, ಹಿಂತೆಗೆತ ಚಿಹ್ನೆಗಳ ನಿರ್ವಹಣೆ, ಕುಡಿತದ ದುಶ್ಪರಿಣಾಮದ ಮೇಲ್ವಿಚಾರಣೆ, ಗುಂಪು ಚಟುವಟಿಕೆ, ಗುಂಪು ಸಲಹೆ, ಸಾಧಕರ ಯಶೋಗಾಥೆ, ವಿಶೇಷ ವೈಜ್ಞಾನಿಕ ಚಿಕಿತ್ಸೆಯನ್ನು ಜರುಗಲಿದೆ.

ರಾಘವೇಂದ್ರ ಗೌಡಾ
ತಾಲೂಕು ಯೋಜನಾಧಿಕಾರಿ ಔರಾದ್