ಏನಾದರೂ ಆಗು ಮೊದಲು ಮಾನವನಾಗು : ಎಂ.ಎಸ್.ರಾಜೇಶ್ವರಿ

ಕಲಬುರಗಿ:ನ.28:ಇಂದು ಮನುಷ್ಯನು ಜಾತಿ, ಮತ, ಪಂಥಗಳ ಸುಳಿಯಲಿ ಸಿಲುಕಿ ತನ್ನ ಮನುಷ್ಯತ್ವವನ್ನು ಮರೆತು, ಮೃಗಗಳಂತೆ ವರ್ತಿಸುತಿದ್ದಾನೆ. ಇವೆಲ್ಲವನ್ನು ತೊರೆದು ಮತ್ತೇ ಮನುಷ್ಯನಾಗಿ ಬದುಕಬೇಕಿದೆ ಎಂದು ಪೆÇ್ರ. ಎಂ.ಎಸ್.ರಾಜೇಶ್ವರಿಯವರು ತಿಳಿ ಹೇಳಿದರು.

ಕಲಬುರಗಿ ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ, ಎನ್.ಎಸ್.ಎಸ್. ಘಟಕ, ಮಹಿಳಾ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂವಿಧಾನದ ಪೂರ್ವ ಪೀಠಿಕೆ ಓದು’ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಅಫಜಲಪೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪೆÇ್ರ. ಎಂ.ಎಸ್.ರಾಜೇಶ್ವರಿಯವರು ಸಂವಿಧಾನದ ಮಹತ್ವ, ಅದರ ಪ್ರಸ್ತುತತೆ ಕುರಿತು ಮಾತನಾಡುತ್ತಾ ಇಂದು ರಾಜಕೀಯ ಪಕ್ಷಗಳು ಸಂವಿಧಾನದ ಆಶಯವನ್ನು ಮೀರಿ ಮತದಾರರ ಭ್ರಷ್ಟರನ್ನಾಗಿಸುತ್ತಿರುವುದು ವಿಷಾದನೀಯ ಎಂದರು. ವೇದಿಕೆಯ ಮೇಲಿದ್ದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ. ಗುರುಮಧ್ವಾಚಾರ್ಯ ನವಲೆಯವರು ಮಾತನಾಡಿ ರಾಮಾಯಣ, ವಿಜ್ಞಾನೇಶ್ವರ ಅವರ ಮಿತಾಕ್ಷರಗಳ ದಟ್ಟವಾದ ಪ್ರಭಾವ ನಮ್ಮ ಸಂವಿಧಾನದ ಮೇಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ದಯಾನಂದ ಎಂ. ಶಾಸ್ತ್ರಿಯವರು ಮಾತನಾಡುತ್ತಾ ಭಾರತೀಯ ವೈವಿಧ್ಯತೆಯನ್ನು ಬೆಂಗಾವಲಾಗಿ ಸಂವಿಧಾನವು ಕಾಪಾಡಿಕೊಂಡು ಬರುತ್ತಿದೆ. ಸಂವಿಧಾನದ ಆಶಯದಂತೆ ನಾವೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು ಎಂದು ಹೇಳಿದರು. ವೇದಿಕೆಯ ಮೇಲೆ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದ ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ ಎಸ್.ಆರ್. ಅವರು ಇದ್ದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು, ಈ ಕಾರ್ಯಕ್ರಮದ ಸಂಚಾಲಕರಾದ ಡಾ. ಕಾಶೀನಾಥ್ ಸಿ.ನೂಲಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆÇ್ರ. ಯು.ಜಿ.ಸರದೇಶಪಾಂಡೆಯವರು ಸಂವಿಧಾನದ ಪೂರ್ವಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಓದಿಸಿದರು. ಕುಮಾರಿ ಸ್ಪೂರ್ತಿ ಪ್ರಾರ್ಥನೆ ಗೀತೆ ಹಾಡಿದರು. ಡಾ. ಮಲ್ಲಿನಾಥ ಎಸ್. ತಳವಾರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಡಾ. ವಿಷ್ಣು ಗುಂಡುಗುರ್ತಿಯವರು ವಂದಿಸಿದರು.