
ಕೊಲ್ಹಾರ:ಫೆ.13: ಗುರುವಿನ ಗುಲಾಮನಾಗುತನಕ ದೊರೆಯದಣ್ಣ ಮುಕುತಿ, ಮನೆಯಲ್ಲಿ ಮೊದಲು ಮಾತಾ ಪಿತೃ ಗುರು, ನಂತರ ವಿದ್ಯಾಗುರು, ತದನಂತರ ಆಧ್ಯಾತ್ಮಿಕ ಗುರು, ಜೀವನದಲ್ಲಿ ಗುರುವಿನ ಸೇವಕನಾಗಿ, ವಿದೇಯಕನಾಗಿ ನಡೆದುಕೊಂಡರೆ ಸಾದಕನ ಸಾಧನೆ ಯಶಸ್ವಿಯಾಗಲು ಸಾಧ್ಯ ಎಂದು ಶೀಲವಂತ ಮಠದ ಡಾ. ಕೈಲಾಸನಾಥ ಶ್ರೀಗಳು ಹೇಳಿದರು.
ಪಟ್ಟಣದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು ಉತ್ತಮ ಸಂಸ್ಕಾರ ಕೊಟ್ಟ ತಂದೆ ತಾಯಿ, ದೇಶ ಕಾಯ್ದು ನಮಗೆ ರಕ್ಷಣೆ ನೀಡಿದ ಸೈನಿಕ, ಭೂ ತಾಯಿ ಸೇವೆ ಮಾಡಿ ನಮಗೆ ಅನ್ನ ನೀಡಿದ ರೈತ ಸಕಲ ಸಾಧನೆಗೆ ಮಾರ್ಗದರ್ಶನ ನೀಡಿ ವಿದ್ಯ ಕಲಿಸಿದ ಗುರು, ಇವು ಎಂದಿಗೂ ಬೆಲೆ ಕಟ್ಟಲಾಗದ ಮೌಲ್ಯಗಳು ಎಂದರು.
ಶಿಕ್ಷಕರಾದ ಸಂಗಮೇಶ ದಶವಂತ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆ ಹೊರಬರಲು ಶಾಲಾ ವಾರ್ಷಿಕೋತ್ಸವದಂತ ಕಾರ್ಯಕ್ರಮಗಳು ಉತ್ತಮ ವೇದಿಕೆಗಳಾಗಿ ಹೊರಹೊಮ್ಮುತ್ತವೆ ಎಂದರು. ಮಕ್ಕಳಲ್ಲಿ ಸೂಕ್ತ ಪ್ರತಿಭೆಗಳು ಅಡಗಿರುತ್ತವೆ ಆ ಪ್ರತಿಭೆ ಹೊರಬರಲು ವೇದಿಕೆಯ ಅವಶ್ಯಕತೆ ಇರುತ್ತದೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಪ್ರಥಮ ಮೆಟ್ಟಿಲಾಗಿ ನಿಲ್ಲುತ್ತವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಫೀಜ್ ನಜೀರಅಹ್ಮದ್ ಪಟೇಲ್ ಖುರಾನ್ ಪಠಣ ಮಾಡಿದರು.
ವೇದಿಕೆಯ ಮೇಲೆ ಜಹಿರುದ್ದೀನ್ ಪಟವಾರಿ, ನಜೀರಅಹ್ಮದ್ ಪರಾಶ್, ಹಜರತಮಾ ಪಕಾಲಿ, ಪ.ಪಂ ಉಪಾಧ್ಯಕ್ಷರಾದ ರಾಜಮಾ ನದಾಫ, ಪ.ಪಂ ಸದಸ್ಯ ತೌಸೀಪ್ ಗಿರಗಾಂವಿ, ಎಸ್.ಎಂ ಡಾಂಗೆ, ಸದ್ದಾಂ ಹೊನ್ಯಾಳ, ಎಂ.ಆರ್ ಕಲಾದಗಿ, ಡೋಂಗ್ರಿ ಜಮಾದಾರ,ಅನ್ವರ ಕಂಕರಪೀರ, ಮಶಾಕ ಬಳಗಾರ, ನೂರ ಕಂಕರಪೀರ ಇದ್ದರು.
ದಾದಾಪೀರ ವಾಲಿಕಾರ ನಿರೂಪಿಸಿದರು, ಹಮೀದಾಬೇಗಂ ಪರಾಶವಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜಅಹ್ಮದ್ ಪರಾಶ್ ಸ್ವಾಗತಿಸಿದರು, ಎಸ್.ಎಂ ಮಠ ವಂದಿಸಿದರು,
























