Home ಜಿಲ್ಲೆ ಕಲಬುರಗಿ ಮಕ್ಕಳಲ್ಲಿ ದೇವರನ್ನು ಕಾಣುವ ಕಾಯಕಪ್ರೇಮಿಗಳಾಗಿ: ಗೋವರ್ಧನ್ ಕರೆ

ಮಕ್ಕಳಲ್ಲಿ ದೇವರನ್ನು ಕಾಣುವ ಕಾಯಕಪ್ರೇಮಿಗಳಾಗಿ: ಗೋವರ್ಧನ್ ಕರೆ

ಆಳಂದ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಬಿ.ಸಿ. ಟ್ರಸ್ಟ್ ವತಿಯಿಂದ ಆಳಂದ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಆಯ್ಕೆಯಾದ ಏಳು ಶಿಕ್ಷಕರಿಗೆ ಜ್ಞಾನ ದೀಪ ಕಾರ್ಯಕ್ರಮದಡಿ ವಸ್ತ್ರ ಉಡುಗೊರೆ ನೀಡಿ ಗೌರವಿಸಲಾಯಿತು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗೋವರ್ಧನ್ ಅವರು ಶಿಕ್ಷಕರಿಗೆ ವಸ್ತ್ರಗಳನ್ನು ವಿತರಿಸಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ದೇವರನ್ನು ಕಾಣುವ ಕಾಯಕಪ್ರೇಮಿಗಳಾಗಬೇಕು. ಸರಳತೆ, ಸಜ್ಜನಿಕೆ ಹಾಗೂ ಸೇವಾ ಮನೋಭಾವದಿಂದ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಓಂಕೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಅರವಿಂದ ಬಾಸ್ಕಿ ಉಪಸ್ಥಿತರಿದ್ದರು.