
ಚಿಂಚೋಳಿ,ಜ.30: ಪಟ್ಟಣದ ಬಸವೇಶ್ವರ ವೃತ್ತದಿಂದ ತಾಂಡೂರ್ ಕ್ರಾಸ್ ಮುಖ್ಯ ರಸ್ತೆಯು ಗುಂಡಿಗಳಿಂದÀ gಹಾಳಾಗಿದ್ದು ಆಟೋ ಮತ್ತು ದ್ವಿಚಕ್ರ ವಾಹನ ಮತ್ತು ಇತರ ವಾಹನಗಳು ಓಡಾಡಲು ಬಹಳಷ್ಟು ತೊಂದರೆ ಆಗುತ್ತಿದೆ ಆದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಬಸವೇಶ್ವರ ವೃತ್ತ ದಿಂದ ತಾಂಡೂರು ಕ್ರಾಸ್ ರಸ್ತೆ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ್ಲ ಏಕೆಂದರೆ ಈ ರಸ್ತೆಯು ಲೋಕೋಪಯೋಗಿ ಇಲಾಖೆ ಬರೋದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಅಂಬರಾಯ ಪಾಟೀಲ್, ಅವರು ಹೇಳುತ್ತಾರೆ ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸಂಬಂಧಪಟ್ಟಿದೆ ಎಂದು ಅವರು ಹೇಳುತ್ತಾರೆ ಆದರೆ ಸಾರ್ವಜನಿಕರಲ್ಲಿ ಗೊಂದಲ ಏನೆಂದರೆ ಲೋಕೋಪಯೋಗಿ ಇಲಾಖೆಯ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಬರುತ್ತದೆ ಅವರು
ಬಸವೇಶ್ವರ ವೃತ್ತ ದಿಂದ ತಾಂಡೂರು ಕ್ರಾಸ್ ವರೆಗೆ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ ಏಕೆಂದರೆ ಇಲ್ಲಿವರೆಗೂ ಆಟೋ ಮತ್ತು ದ್ವಿಚಕ್ರ ವಾಹನ ನಡುವೆ ಅನೇಕ ಅಪಘಾತವಾಗಿದ್ದು ಕೈಗೆ ಕಾಲಿಗೆ ಬಹಳಷ್ಟು ಜನರಿಗೆ ಪೆಟ್ಟು ಆಗಿದ್ದು ಇದಕ್ಕೆಲ್ಲ ಕಾರಣ ರಸ್ತೆ ಗುಂಡಿ ಹೆಚ್ಚಾಗಿದ್ದು ಆಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಸವೇಶ್ವರ ವೃತ್ತ ದಿಂದ ತಾಂಡೂರು ಕ್ರಾಸ್ ರಸ್ತೆ ಗುಂಡಿಗಳು ಮುಚ್ಚಿ ಮುಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ನಮ್ಮ ಕರ್ನಾಟಕ ಸೇನೆಯ ತಾಲೂಕಾಧ್ಯಕ್ಷ ಪ್ರಭಾಕರ್ ಗೌಡ, ಅವರು ಲೋಕೋಪಯೋಗಿ ಇಲಾಖೆಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ತೆಗ್ಗು ಗುಂಡಿಗಳನ್ನು ಮುಚ್ಚದಿದ್ದರೆ ನಮ್ಮ ಕರ್ನಾಟಕ ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಸಿದಾರೆ























