ಶಿಕ್ಷಕ ರತ್ನ ಜಿಲ್ಲಾ ಪ್ರಶಸ್ತಿಗೆ ಬಸವರಾಜ ಆಯ್ಕೆ

ವಿಜಯಪುರ, ಸೆ. 8:ಕರಾಟೆ ತರಬೇತಿ ಶಿಕ್ಷಕ ಬಸವರಾಜ ಬಾಗೇವಾಡಿ ಉತ್ನಾಳ ಅವರು ಶಿಕ್ಷಕ ರತ್ನ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದೇಶಿಯ ಮತ್ತು ವಿದೇಶಿಯ ಅನೇಕ ಕ್ರೀಡೆಗಳನ್ನು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಪರಿಚಯಿಸಿ ಸ್ಥಾಪನೆ ಮಾಡಿ ಮತ್ತು ತರಬೇತಿ ನೀಡುತ್ತಿರುವದನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಸಕ್ತ ಸಾಲಿನ ಚಡಚಣ ತಾಲೂಕಿನ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಸೆ. 9 ರಂದು ಚಡಚಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶಿಕ್ಷಕ ರತ್ನ ಜಿಲ್ಲಾ ಪ್ರಶಸ್ತಿಯನ್ನು ಬಸವರಾಜ ಬಾಗೇವಾಡಿ ಉತ್ನಾಳ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್. ಎಸ್. ಹಾವಿನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.