
ಕಲಬುರಗಿ,ಡಿ.3: ಸಿನಿಮಾ ಕ್ಷೇತ್ರದಲ್ಲಿನ 50 ವರ್ಷ ಸುದೀರ್ಘ ಸೇವೆ ಪರಿಗಣಿಸಿ ಜಿಲ್ಲೆಯ ಶಹಬಾದ ಪಟ್ಟಣದ ಬಸವರಾಜ ನಂದಿಧ್ವಜ ಅವರಿಗೆ ಬೀದರ ಮೂಲದ ವಿಶ್ವ ಕನ್ನಡಿಗರ ಸೇನೆಯು 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಿಮಿತ್ಯ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದೆ
ಡಿಸೆಂಬರ್ 9 ರಂದು ಬೀದರ ನಗರದ ಡಾ.ಚೆನ್ನಬಸವಪಟ್ಟದೇವರು ರಂಗಮಂದಿರದಲ್ಲಿ ನಡೆಯುವ ರಾಜ್ಯ ಮಟ್ಟದ ಗಡಿ ಕನ್ನಡಿಗರ ಉತ್ಸವ, 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಸವರಾಜ ನಂದಿಧ್ವಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಾ.ಸುಬ್ಬಣ್ಣ ಕರಕನಳ್ಳಿ ಅವರು ತಿಳಿಸಿದ್ದಾರೆ. ಬಸವರಾಜ ನಂದಿಧ್ವಜ ಅವರು ಕಿರುಚಿತ್ರ, ಧಾರಾವಾಹಿ, ಟೆಲಿ ಫಿಲ್ಮ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ ಇದಲ್ಲದೆ ಆರಂಭದಲ್ಲಿ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದ್ದಾರೆ.

























