
ಬಸವಕಲ್ಯಾಣ,ಜ.14-ಉರಿಲಿಂಗಪೆದ್ದಿ ವiತ್ತು ಕಾಳವ್ವೆ ಉತ್ಸವ ಲಿಂಗೈಕ್ಯ ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯಸ್ಮರಣೋತ್ಸವ ಮತ್ತು ಪ್ರಥಮ ಪ್ರಕಾಶಕರ ಸಮ್ಮೇಳನವನ್ನು ಫೆಬ್ರುವರಿ 7 ಮತ್ತು 8 ರಂದು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮಠದ ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ ತಿಳಿಸಿದರು.
ಬೇಲೂರು ಉರಿಲಿಂಗ ಪೆದ್ದಿ ಮಠದ ಆವರಣದಲ್ಲಿ ಸೇರಿದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹದಿನೆಂಟು ವರ್ಷಗಳಿಂದ ಇಂತಹ ಉತ್ಸವ ಮಾಡುತ್ತಿದ್ದು, ಈ ವರ್ಷ ಕಾಳವ್ವೆಯ ಉತ್ಸವ ಸೇರಿಸಲಾಗಿದೆ. ಉರಿಲಿಂಗ ಪೆದ್ದಿ ಪ್ರಶಸ್ತಿ, ಕಾಳವ್ವೆ ಪ್ರಶಸ್ತಿ ಜೊತೆಗೆ ಕರುನಾಡು ಮತ್ತು ಧರಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ವರ್ಷ ಪ್ರಥಮ ಪ್ರಕಾಶಕರ ಸಮ್ಮೇಳನ ಆಯೋಜಿಸಲಾಗುವುದು. ಅಕ್ಷರ ಸಂಸ್ಕøತಿಯ ಚಿಂತನೆ, ಪ್ರಕಾಶಕ, ಲೇಖಕ, ಓದುಗರು ಈ ತ್ರಿವೇಣಿ ಸಂಗಮ ಕುರಿತು ಚಿಂತನೆ ಮಾಡಲು ಪ್ರಕಾಶಕರ ಸಮಸ್ಯೆ ಸವಾಲುಗಳ ಬಗ್ಗೆ ಸಂವಾದ ಮಾಡಲಾಗುವುದು. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪುಸ್ತಕೋದ್ಯಮಿ, ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಪ್ರಕಾಶಕರಾದ ಡಾ.ಬಸವರಾಜ ಕೊನೇಕ ಅವರನ್ನು ಆಯ್ಕೆ ಮಾಡಲಾಯಿತು.
ಸಂಯೋಜಕ ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿ, ಪ್ರಕಾಶಕರ ಸಮ್ಮೇಳನ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಡಾ.ರಾಜಕುಮಾರ ಮಾಳಗೆ, ಡಾ.ಸಿದ್ದಪ್ಪ ಹೊಸಮನಿ, ಡಾ.ಪೀರಪ್ಪ ಸಜ್ಜನ್, ನಾಗಪ್ಪ ಬಿ.ನಿಣ್ಣೆ, ಸಂಜೀವಕುಮಾರ ಖೇಲೆ, ಗುರುನಾಥ ವಾಘಮಾರೆ, ವಿನೋದ ಸಿಂದೆ, ಭೀಮಶ್ಯಾ ಮಾಘಮಾರೆ, ಸುಶೀಲ ಮಚಕೂರಿ, ನಿಜಗುಣ ಉರಿಲಿಂಗ ಪೆದ್ದಿ, ಪ್ರಕಾಶ ಸಿಂಗೆ, ರಾಜಕುಮಾರ ಮುಡಬಿಕರ, ಡಾ.ರಾಜಕುಮಾರ ಮಾಳಗೆ, ನಿಖಿಲ ಬೆಳ್ಳೆ, ನವನಾಥ ಬೆಳ್ಳೆ, ಶಿವಕುಮಾರ ಕಾಂಗೆ, ಗೌತಮ ಕಾಂಬಳೆ, ನಾಮದೇವ ಉರಿಲಿಂಗ ಪೆದ್ದಿ, ತ್ರಿವಣಾ, ನಂದಾಬಾಯಿ, ಸುಶೀಲಾಬಾಯಿ, ರೋಹಿದಾಸ ಹೆಬ್ರೆ, ಸಮ್ಮುಖ ರಾಜಗುರು, ಲೋಕೇಶ ಕಾಂಗೆ, ಗಣೇಶ, ಚೇತನ್, ರಾಘು, ಅವಿನಾಶ ಪಂಚಾಳ, ಧನಾಬಾಯಿ, ದುರ್ಪದಬಾಯಿ, ಬಲಭೀಮ ವಾಂಖೇಡೆ, ಉಜ್ವಲ ಸೂರ್ಯವಂಶಿ, ಸಂಜು ಜಾಧವ, ವಿನೋದ ಸಿಂದೆ, ಗೌತಮ್ ವಾಘಮೊರೆ ಇದ್ದರು























