ಕೊಲ್ಹಾರ:ಸೆ.12: ರಾಜ್ಯ ಪ್ರಶಸ್ತಿ ಪುರಸ್ಕøತ ಉಪನ್ಯಾಸಕರಾದ
ಪೆÇ್ರ; ಬಸವರಾಜ ಜಾಲವಾದಿಯವರು ನಮ್ಮೂರಿನ ಹೆಮ್ಮೆ.ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರಾಗುವುದರೊಂದಿಗೆ ಗ್ರಾಮದ ಮತ್ತು ನಮ್ಮ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸೋಮು ಸಾಗರ್ ಹೇಳಿದರು
ಅವರು ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಏರ್ಪಡಿಸಿದ ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಪೆÇ್ರ;ಬಸವರಾಜ ಜಾಲವಾದಿಯವರನ್ನು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡುತ್ತಿದ್ದರು.
ಇಂತಹ ವ್ಯಕ್ತಿಗಳಿಗೆ ಪ್ರಶಸ್ತಿ ಕೊಟ್ಟಾಗ ಅದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತದೆ ಏಕೆಂದರೆ ಹಲವಾರು ವರ್ಷಗಳಿಂದ ನಮ್ಮೂರಿನ ವಿದ್ಯಾರ್ಥಿಗಳಿಗೆ ಅವರು ಕೈಕೊಂಡಿರುವ ನವೀನ ಪ್ರಯೋಗಗಳು ಹಾಗೂ ಅವರ ಸಾರ್ವಜನಿಕ ಸಂಬಂಧ ಅನುಕರಣೆಅನುಕರಣೀಯವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೆÇ್ರ ಬಸವರಾಜ ಜಾಲವಾದಿಯವರು ಅಧ್ಯಾಪಕರು ಮೊಬೈಲ್ ಬಿಡಿ ಪುಸ್ತಕ ಕೈಯಲ್ಲಿ ಹಿಡಿ ಎಂಬುದನ್ನ ವಿದ್ಯಾರ್ಥಿಗಳಿಗೆ ಒತ್ತಿ ಒತ್ತಿ ಹೇಳಬೇಕಿದೆ .
ವಿದ್ಯಾರ್ಥಿಗಳಾದವರು ಐದುವರ್ಷ ಕಷ್ಟಪಟ್ಟು ಓದಿದಾಗ ಐವತ್ತು ವರ್ಷ ಸುಖವಾಗಿರುತ್ತೀರಿ.ಸುಖವನ್ನು ಅಪೇಕ್ಷಿಸುವವನಿಗೆ ವಿದ್ಯೆ ಎಲ್ಲಿಯದೆಂದರು.
ಅತಿಥಿ ಸ್ಥಾನದಿಂದ ಮಾತನಾಡಿದ ನಿವೃತ್ತ ಪಶು ವೈದ್ಯಾಧಿಕಾರಿ ಬಿ.ಬಿ ಮುತ್ತತ್ತಿ ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೋಸ್ಕರ ಅವರು ತೆಗೆದುಕೊಂಡಿರುವ ನವೀನ ಪ್ರಯೋಗಗಳು ಶಿಕ್ಷಣ ಪ್ರೇಮಿಗಳ ಹಾಗೂ ಗ್ರಾಮದವರ ಮನ ಸೆಳೆದು ಯಶಸ್ವಿಯಾದುದರ ಪರಿಣಾಮವೇ ಅವರಿಗೆ ಈ ಪ್ರಶಸ್ತಿ ದಕ್ಕಿದೆ ಅದು ನಮ್ಮೂರಿನ ಪುಣ್ಯ ಎಂದು ಹೇಳಿದರು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಖುಷಬ್ ಲಮಾಣಿ ಮಾತನಾಡಿ ಸಮಾರಂಭದ ಮುಖ್ಯ ಉದ್ದೇಶ ಸಮಾಜದ ಪ್ರಗತಿಗೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಕಾರಣರಾದ ಇಂಥವರನ್ನು ಸನ್ಮಾನಿಸುವುದೇ ನಮ್ಮ ಸೌಭಾಗ್ಯ ಇಂಥವರಿಗೆ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳುತ್ತದೆ ಎಂದರು.
ವೇದಿಕೆಯ ಮೇಲೆ ಸೀಮಾ ಹರಿಕಾಂತ್ರಿ, ಶ್ರೀದೇವಿ ಪಡಸಲಗಿ ಸುರೇಶ್ ಜಾದವ್, ಸುಪ್ರಿಯಾ ಕೋಟ್ಯಾಳ, ಸಂಗಪ್ಪ ಪೂಜಾರಿ, ರಮೇಶ್ ಮಂಕಣಿ,ಶೀತಲಾ ಗೌಡ, ಪ್ರವೀಣ ರಾಠೋಡ್ ರವಿ ಕರಿಯಣ್ಣನವರ್, ವರ್ಮಿರಾ ಗೌಡ,ಅಪೂರ್ವ ಕೆ. ಆರ್ ಹಾಜರಿದ್ದರು.






















