
ಕೊಲ್ಹಾರ:ಡಿ.೧೪: ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡಗಿಯಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ೨೦೨೫- ೨೬ ನೇ ಸಾಲಿನ “ರಾಜ್ಯಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ”ಗೆ ಭಾಜನರಾದ ಬಸವರಾಜ ಜಾಲವಾದಿ ಈಗ ರಾಷ್ಟ್ರಮಟ್ಟದ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ
ಕರ್ನಾಟಕ ಹಾಗೂ ಭಾರತ ಸರಕಾರದ ಮಾನ್ಯತೆ ಸಂಸ್ಥೆಯಾಗಿರುವ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾಪ್ರಕಾಶನ ಸಂಸ್ಥೆ ರಿ ಕರ್ನಾಟಕ ಸಾಧಕರು ಸಂಸ್ಥೆಯಾಗಿರುವ ಕಡಲ ಬಾಳು ಹಗರಿಬೊಮ್ಮನಹಳ್ಳಿ ಬಳ್ಳಾರಿ ಜಿಲ್ಲೆಯ ಡಾ// ನಾಗರಾಜ ತಂಬ್ರಳ್ಳಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ ೧೪ ರಂದು ಬಾದಾಮಿಯಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಬಾದಾಮಿಯವರು ಆಯೋಜಿಸಿರುವ ರಾಷ್ಟ್ರಮಟ್ಟದ ಸಾಧಕರಿಗಾಗಿ ಏರ್ಪಡಿಸಿದ ಸಮಾರಂಭದಲ್ಲಿ ಕೂಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವಿ ಸಲ್ಲಿಸುತ್ತಿರುವ ಬಸವರಾಜ ಜಾಲವಾದಿಯವರಿಗೆ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಕವಿ ಲೇಖಕ ಬರಹಗಾರ ಹಾಗೂ ದಿಕ್ಸೂಚಿ ಭಾಷಣಕಾರರಾಗಿರುವ ಬಸವರಾಜ ಜಾಲವಾದಿಯವರು ಕನ್ನಡ ನಾಡು ನುಡಿ ನೆಲ ಜಲ ಶಿಕ್ಷಣ ಸಾಮಾಜಿಕ ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ ಪ್ರಯುಕ್ತ ಈ ಪ್ರಶಸ್ತಿ ನೀಡಲಾಗುತ್ತಿದೆ,
























