
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. ೯:ಪವರ್ ಸ್ಟಾರ್ ಪುನೀತ ರಾಜಕುಮಾರ ಪ್ರಶಸ್ತಿಗೆ ವಿಜಯಪುರದ ಕರಾಟೆ ಕೋಚ್ ಬಸವರಾಜ ಬಾಗೇವಾಡಿ ಅವರು ಆಯ್ಕೆಯಾಗಿದ್ದಾರೆ.
ಮಾ. ೧೫ ರಂದು ಡಾ. ಅಂಬೇಡ್ಕರ್ ಸಭಾಭವನ ಯಲಹಂಕ ಬೆಂಗಳೂರಿನಲ್ಲಿ ಖಿಗಿ ೪ ಸುದ್ದಿ ವಾಹಿನಿ, ಶ್ರೀ ಶಿರಡಿ ಸಾದೀಪ ಮೀಡಿಯಾ ಬ್ರಾಡ್ಕಾ ಸ್ಟಿಂಗ್ ಸರ್ವಿಸ ಶ್ರೀ ಸಾಯಿ ದೀಪ್ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿವಿಧ ಕ್ರೀಡೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಕರಾಟೆ ಕೋಚ್ ಬಸವರಾಜ ಬಾಗೇವಾಡಿ ಉತ್ನಾಳ ಅವರಿಗೆ ಈ ವರ್ಷ ಕೊಡುಮಾಡುವ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ ರಾಜಕುಮಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ, ಖಿಗಿ ೪ ಸುದ್ದಿವಾಹಿನಿ ಮಾಲೀಕರು, ಸಂಸ್ಥಾಪಕ ಅಧ್ಯಕ್ಷರು, ಶ್ರೀ ಶಿರಡಿ ಸಾಯಿ ದೀಪ ಚಾರಿಟೇಬಲ್ ಟ್ರಸ್ಟ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕ ಡಾ. ಸಾಯಿ ಸತೀಶ ತೋಟಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















