
ವಾಡಿ:ಮಾ.5: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಚಿತ್ತಾಪುರ ತಾಲೂಕಿನ ಆರು ಜನ ಸಾಧಕರನ್ನು 2025/26ನೇ ಸಾಲಿನ “ಬಸವ ಶ್ರೀ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಾಡಿ ಪಟ್ಟಣದ ಶ್ರೀಬಸವ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಜಗದೀಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡುವ ಅವರು ಪೆÇಲೀಸ್ ಅಧಿಕಾರಿಯಾಗಿ ಧಕ್ಷ ಆಡಳಿತ ನೀಡುತ್ತಿರುವ ಶಹಾಬಾದ್ ಉಪ ವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಜನಪರ ವರದಿಗಳ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಹಾಗೂ ಸಾಹಿತ್ಯ ಕೃಷಿಯಲ್ಲಿ ಗುರುತಿಸಿಕೊಂಡಿರುವ ಮಡಿವಾಳಪ್ಪ ಹೇರೂರ, ಶೈಕ್ಷಣಿಕ ಕಲಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಜ್ಯೋತಿ ಆರ್.ತೆಗನೂರ, ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಜನರ ಸೇವೆ ಮಾಡುತ್ತಿರುವ ಅರ್ಚನಾ ಡಾ.ಮಲ್ಲಿಕಾರ್ಜುನ ಹಿರೇಮಠ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಚಂದ್ರಕಲಾ ಶೀತಲ್ ಜೈನ್ ಹಾಗೂ ಸಾಮಾಜಿಕ ಸೇವೆಯಲ್ಲಿರುವ ಸಿದ್ದಣ್ಣ ನಾಗಣ್ಣ ಮುಗುಟಿ ಅವರನ್ನು ಬಸವ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾ.7 ರಂದು ಸಾಯಂಕಾಲ 6:00 ಗಂಟೆಗೆ ವಾಡಿ ಪಟ್ಟಣದ ಶ್ರೀ ಬಸವ ಶಾಲೆಯ ಮೈದಾನದಲ್ಲಿ ನಡೆಯಲಿರುವ ಬಸವ ಮಹೋತ್ಸವ ಸಮಾರಂಭದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.






















