ಚನ್ನಮ್ಮನ ಕಿತ್ತೂರು,ಆ 18: ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಕಿತ್ತೂರು ಹಾಗೂ ಮಲ್ಲಾಪೂರ ರಾಷ್ಟ್ರೀಯ ಬಸವ ದಳದ ಸಂಯುಕ್ತ ಆಶ್ರಯದಲ್ಲಿ ಬಸವ ಜ್ಯೋತಿ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಜರುಗಿತು.
ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಅಶೋಕ ಅಳ್ನಾವರ ಮಾತನಾಡಿ ಶರಣರ ಆದರ್ಶಗಳನ್ನು ಜನರ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಈ ಕಾರ್ಯಕ್ರಮವು, ಲಿಂಗಾಯತ ಸಮಾಜವನ್ನು ಬಸವಧರ್ಮದತ್ತ ಇನ್ನ?À್ಟು ಸನಿಹಗೊಳಿಸುವ ಗುರಿಯನ್ನು ಹೊಂದಿದೆ. ಎಂದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ವಚನ-ತತ್ವಗಳು ಇಂದು ಜೀವಂತವಾಗಿವೆ ಎಂದರು.
ಕೂಡಲ ಸಂಗಮ ಮಹಾಪೀಠದ ಶ್ರೀ ಪ್ರಭುಲಿಂಗ ಸ್ವಾಮಿಜೀ ಆಶೀರ್ವಚನ ನೀಡಿ ಜನರು ಧರ್ಮದ ಕಡೆಗೆ ವಾಲದಿದ್ದರೆ ಧರ್ಮವೇ ಮನೆ-ಮನಗಳಿಗೆ ತೆರಳಲಿ ಎಂಬ ಉದ್ದೇಶದಿಂದ ಲಿಂಗಾನಂದ ಸ್ವಾಮಿಗಳು ಹಾಗೂ ಮಾತೆ ಮಹಾದೇವಿಯವರಿಂದ ಈ ಬಸವ ಜ್ಯೋತಿ ಕಾರ್ಯಕ್ರಮ ಆರಂಭವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂದೀಪ ದೇಶಪಾಂಡೆಯವರಿಂದ ವಚನಗಾನ ಏರ್ಪಟ್ಟಿತು ಕಾರ್ಯಕ್ರಮವನ್ನು ಮಡಿವಾಳೆಪ್ಪ ಕೋಟಿ ನಿರೂಪಿಸಿದರು. ಮಲ್ಲಿಕಾರ್ಜುನ ಸಾಣಿಕೊಪ್ಪ, ಜಗದೀಶ ಕಂಬಾರಣವಿ, ಬಸನಗೌಡ ಸಿದ್ರಾಮನಿ, ಡಿ ಆರ್ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಕ್ರಂ ಇನಾಮದಾರ, ಮಂಜುನಾಥ ದಿಬ್ಬದ, ಕಿರಣ ಪಾಟೀಲ, ಕಸಪಾ ಅಧ್ಯಕ್ಷ ಎಸ್. ಬಿ. ದಳವಾಯಿ, ಮಹೇಶ್ ಪೂಜೇರ, ರಾಯಪ್ಪ ಹಣಜಿ, ಕಲ್ಲಪ್ಪ ತಡಕೋಡ, ಬಸವರಾಜ ಅವರಾದಿ, ಬಸವರಾಜ ಜಕಾತಿ, ಮಂಜುಳಾ ದೊಡ್ಡಗೌಡರ, ಉಮಾ ಸಾಣಿಕೊಪ್ಪ, ಮುರಗೇಶ ದೊಡ್ಡಗೌಡರ, ಬಸವರಾಜ ಮಾತನವರ, ಪಾಪು ನರಗುಂದ, ಚನ್ನಬಸಪ್ಪ ಮೊಕಾಶಿ, ಉಳವಪ್ಪ ಉಳ್ಳಾಗಡ್ಡಿ ಸೇರಿದಂತೆ ಅನೇಕ ಶರಣರು ಹಾಗೂ ಗಣ್ಯರು ಉಪಸ್ಥಿತರಿದ್ದರು.

























